ಬೆಂಗಳೂರು: ಬೆಂಗಳೂರಿನ ಮಾರ್ಥಸ್ ಆಸ್ಪತ್ರೆಯಲ್ಲಿ ಬೆಳ್ಳಂಬೆಳಗ್ಗೆ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಮಾರ್ಥಸ್ ಆಸ್ಪತ್ರೆ ನವೀಕರಣ ಕಾಮಗಾರಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಬಂದ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಆದರೆ ಕೆಲಸ ಮಾಡುತ್ತಿರುವಾಗ ಮೇಲ್ಛಾವಣಿ ಕುಸಿದಿದ್ದು, ಇಬ್ಬರನ್ನು ಈಗಾಗಲೇ ರಕ್ಷಿಸಲಾಗಿದೆ. ಮತ್ತಿಬ್ಬರಿಗಾಗಿ ಹುಡುಕಾಡುತ್ತಿದ್ದಾರೆ.
ಘಟನೆಯಲ್ಲಿ ರಪೀಸಾಬ್, ಬಸವರಾಜು ಇಬ್ಬರು ಕಾರ್ಮಿಕರು ಮೇಲ್ಚಾವಣಿ ಕೆಳಗೆ ಸಿಲುಕಿದ್ದಾರೆ. ರಾಯಚೂರು ಮೂಲದ ಇಬ್ಬರು ಕಾರ್ಮಿಕರಾಗಿದ್ದಾರೆ. ನಿರ್ಮಾಣ ಹಂತದ ಮೇಲ್ಛಾವಣಿ ಕುಸಿತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಆಗಮಿಸಿದ್ದು, ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನಾರಚನೆ?
ಸುಮಾರು ಅರವತ್ತು ಅಡಿ ಉದ್ದದ ಮೇಲ್ಛಾವಣಿ ಕುಸಿತವಾಗಿರುವುದರಿಂದ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಸ್ಪತ್ರೆ ಮೇಲ್ಚಾವಣಿಗೆ ಸುಮಾರು ಅರವತ್ತು ಅಡಿ ದೂರಕ್ಕೆ ಫಿಲ್ಲರ್‌ಗಳು ನಿರ್ಮಾಣವಾಗುತ್ತಿತ್ತು. ಫಿಲ್ಲರ್‌ಗಳ ದೂರಕ್ಕೆ ನಿರ್ಮಾಣ ಮಾಡಿರುವ ಪರಿಣಾಮ ಕುಸಿದುಬಿದ್ದಿರುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣ