ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ ರೊಮಾರಿಯೊ ಶೆಫರ್ಡ್ (Romario Shepherd) ಕೇವಲ 14 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
Are you not entertained? 🤩
Romario Shepherd thrilled the M. Chinnaswamy Stadium with a ‘blink and you miss’ knock 🫡🔥
Updates ▶ https://t.co/I4Eij3ZNlN#TATAIPL | #RCBvCSK | @RCBTweets pic.twitter.com/uPDjTUpOvY
— IndianPremierLeague (@IPL) May 3, 2025
ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮತೀಶ ಪಥಿರಣ ಬೌಲಿಂಗ್‌ಗೆ 20 ರನ್ ಚಚ್ಚಿದ ಶೆಫರ್ಡ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಗೆಕೆ ಪಾತ್ರರಾದರು. ಜೊತೆಗೆ ಈ ಸಾಧನೆ ಮಾಡಿದ ಕನ್ನಡಿಗ ಕೆ.ಎಲ್ ರಾಹುಲ್, ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಗಳನ್ನೂ ಸರಿಗಟ್ಟಿದರು.
ವೇಗದ ಫಿಫ್ಟಿ ಬಾರಿಸಿದ ಟಾಪ್-5 ಪ್ಲೇಯರ್ಸ್
ಯಶಸ್ವಿ ಜೈಸ್ವಾಲ್ – ರಾಜಸ್ಥಾನ್ ರಾಯಲ್ಸ್ 13 ಎಸೆತ (2023)
ರೊಮಾರಿಯೊ ಶೆಫರ್ಡ್ – ಆರ್‌ಸಿಬಿ – 14 ಎಸೆತ (2025)
ಕೆ.ಎಲ್ ರಾಹಿಲ್ – ಪಿಬಿಕೆಎಸ್ – 14 ಎಸೆತ (2018)
ಪ್ಯಾಟ್ ಕಮ್ಮಿನ್ಸ್ – ಕೆಕೆಆರ್ – 14 ಎಸೆತ (2022)
ಯೂಸೂಫ್ ಪಠಾಣ್ – ಕೆಕೆಆರ್ – 15 ಎಸೆತ (2014)
ಕೊನೇ 2 ಓವರ್‌ಗಳಲ್ಲಿ 54 ಎನ್:
ಆರ್‌ಸಿಬಿ ಪರ ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ಜಾಕೊಬ್ ಬೆಥೆಲ್ ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ರನ್ ವೇಗವೂ ಕಡಿತಗೊಂಡಿತ್ತು. 14 ಓವರ್‌ಗಳಲ್ಲಿ 144 ರನ್ ಗಳಿಸಿದ್ದ ಆರ್‌ಸಿಬಿ 18 ಓವರ್ ಕಳೆದರೂ 160 ರನ್ ಗಡಿ ದಾಟುವಲ್ಲಿ ವಿಫಲವಾಗಿತ್ತು. ಇದರಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವುದೂ ಕಷ್ಟವಾಗಿತ್ತು. ಆದ್ರೆ ಕೊನೆಯಲ್ಲಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್ 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್ ಚಚ್ಚಿದರು. ಜೊತೆಗೆ 20ನೇ ಓವರ್‌ನಲ್ಲಿ ಬರೋಬ್ಬರಿ 20 ರನ್ ಚಚ್ಚಿದ ಪರಿಣಾಮ ಆರ್‌ಸಿಬಿ ಸುಲಭವಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಆರ್‌ಸಿಬಿ ಪರ ವಿರಾಟ್ ಕೊಗ್ಲಿ 62 ರನ್ (33 ಎಸೆತ, 5 ಸಿಕ್ಸರ್, 5 ಬೌಂಡರಿ), ಬೆಥೆಲ್ 55 ರನ್ (33 ಎಸೆತ, 2 ಸಿಕ್ಸರ್, 8 ಬೌಂಡರಿ), ರೊಮಾರಿಯೊ ಶೆಫರ್ಡ್ 53 ರನ್ (14 ಎಸೆತ, 6 ಸಿಕ್ಸರ್, 4 ಬೌಂಡರಿ) ಚಚ್ಚಿದರು. ಇನ್ನುಳಿದಂತೆ ದೇವದತ್ ಪಡಿಕಲ್ 17 ರನ್, ರಜತ್ ಪಾಟಿದಾರ್ 11 ರನ್, ಜಿತೇಶ್ ಶರ್ಮಾ 7 ರನ್, ಟಿಮ್ ಡೇವಿಡ್ 2 ರನ್ ಕೊಡುಗೆ ನೀಡಿದರು.