Connect with us

Districts

ಬೆಂಗಳೂರಲ್ಲಿ ಹೈಟೆಕ್ ಡೆಬಿಟ್, ಕ್ರೆಡಿಟ್ ಕಾರ್ಡ್ ಹ್ಯಾಕ್- ಇಬ್ಬರು ವಿದೇಶಿಯರು ಅರೆಸ್ಟ್

Published

on

ಬೆಂಗಳೂರು: ಸ್ಕಿಮ್ಮಿಂಗ್ ಮಷಿನ್‍ನಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಕದಿಯುತ್ತಿದ್ದ ಜಾಲವೊಂದನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

ಎಂಜಿ ರೋಡ್‍ನಲ್ಲಿರುವ ಕೋಟಕ್ ಮಹೀಂದ್ರ ಬ್ರಾಂಚ್ ಅಧಿಕಾರಿಗಳು ದೂರಿನ ಆಧಾರದ ಮೇಲೆ, ಸಿಐಡಿ ಸೈಬರ್ ಘಟಕದ ಪೊಲೀಸರು ರೊಮೇನಿಯಾ ದೇಶದ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯದ ಆಧಾರದ ಮೇಲೆ ವಿಮಾನ ನಿಲ್ದಾಣ ಬಳಿ ನೆಲೆಸಿದ್ದ ಡಾನ್ ಸ್ಯಾಬಿಯನ್ ಕ್ರಿಶ್ಚಿಯನ್ ಮತ್ತು ಮಾರೆ ಜಾನೋಸ್ ರನ್ನು ಬಂಧಿಸಿದ್ದಾರೆ.

ಬಂಧಿತರ ವಿರುದ್ಧ ವಿದೇಶಗಳಲ್ಲಿಯೂ ಪ್ರಕರಣಗಳಿವೆ. ಇಂಟರ್ ಪೋಲ್ ಮೂಲಕ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗ್ತಿದೆ.

ಹೇಗೆ ಕದಿಯುತ್ತಿದ್ರು?
ಬೆಳಗಿನ ಜಾವ ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಮಷಿನ್ ಇಟ್ಟು ಕಾರ್ಡ್ ಇಟ್ಟು, ಪಿನ್ ನಂಬರ್ ಎಂಟರ್ ಮಾಡುವುದನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣ ಬಳಿಯ ಕೋಟಕ್ ಮಹೀಂದ್ರಾ ಎಟಿಎಂ, ಎಂಜಿ ರೋಡ್‍ನಲ್ಲಿರೋ ಗರುಡಾ ಮಹಲ್‍ನ ಸಿಟಿ ಬ್ಯಾಂಕ್ ಎಟಿಎಂ, ಎಂಜಿ ರಸ್ತೆ ಕೆನರಾ ಬ್ಯಾಂಕ್ ಎಟಿಎಂ, ಟ್ರಿನಿಟಿ ಸರ್ಕಲ್‍ನಲ್ಲಿರುವ ಮೆಟ್ರೋ ಸ್ಟೇಷನ್‍ನ ಕೋಟಕ್ ಮಹೀಂದ್ರಾ ಎಟಿಎಂ, ಬ್ರಿಗೇಡ್ ರಸ್ತೆಯ ಕೋಟಕ್ ಮಹೀಂದ್ರಾ ಎಟಿಎಂಗಳಲ್ಲಿ ಡಾಟಾ ಕಳ್ಳತನ ಮಾಡುತ್ತಿದ್ದರು. ಕಲೆ ಹಾಕಿದ ಡಾಟಾಗಳನ್ನು ಇಂಗ್ಲೆಂಡ್‍ನ ಸಹಚರರ ಜೊತೆ ಹಂಚಿಕೊಳ್ತಿದ್ದರು. ಈಗ ಈ ಎಲ್ಲಾ ಎಟಿಎಂಗಳಲ್ಲಿ ಕಾರ್ಡ್ ಬಳಕೆ ಮಾಡಿದ ಗ್ರಾಹಕರು ಪಿನ್ ಬದಲಾವಣೆ ಮಾಡಿಕೊಳ್ಳುವಂತೆ ಬ್ಯಾಂಕ್‍ ಮನವಿ ಮಾಡಿದೆ.

ಏನಿದು ಸ್ಕಿಮ್ಮಿಂಗ್ ಮಷಿನ್?
ಕಳ್ಳರು ಎಟಿಎಂ ಮಷಿನ್ ಮೇಲೆ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡುತ್ತಾರೆ. ಕಾರ್ಡ್ ಸ್ಪೈಪ್ ಮಾಡೋ ಜಾಗದಲ್ಲಿ ಸಣ್ಣದೊಂದು ಕಾರ್ಡ್ ಹಾಕ್ತಾರೆ. ಗ್ರಾಹಕರು ಸ್ಪೈಪ್ ಮಾಡಿದ ಕೂಡಲೇ ಕಾರ್ಡ್‍ನಲ್ಲಿದ್ದ ಮ್ಯಾಗ್ನೆಟ್ಟಿಂಗ್ ಸ್ಟ್ರೇಬ್ಸ್ ಹ್ಯಾಕ್ ಆಗುತ್ತೆ. ಬಳಿಕ ಹಿಡನ್ ಕ್ಯಾಮೆರಾದಿಂದ ಪಾಸ್‍ವರ್ಡ್‍ನ್ನು ಕ್ಯಾಪ್ಚರ್ ಮಾಡ್ತಾರೆ. ಬಳಿಕ ನಕಲಿ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡುತ್ತಾರೆ.

Click to comment

Leave a Reply

Your email address will not be published. Required fields are marked *

www.publictv.in