ಬಾಲಿವುಡ್ ನಲ್ಲಿ ಅನೇಕ ಚಿತ್ರಗಳನ್ನು ಮಾಡಿರುವ ರಾಶಿ ಖನ್ನಾ ಇದೀಗ ಪಕ್ಕಾ ಕಮರ್ಷಿಯಲ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಇಂದು ರಿಲೀಸ್ ಆಗಿದೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಆ ಹೇಳಿಕೆ ಸಖತ್ ವೈರಲ್ ಕೂಡ ಆಗಿದೆ. ರಾಶಿ ಅವರ ಸ್ವಅನುಭವದ ಪ್ರಕಾರ ಕಾಮಿಡಿ ಮಾಡುವುದಕ್ಕಿಂತ ಸಲೀಸಾಗಿ ಹೀರೋಗಳ ಜೊತೆ ರೋಮ್ಯಾನ್ಸ್ ಮಾಡಬಹುದು ಎಂದಿದ್ದಾರೆ.
ಅಂದರೆ, ಕಾಮಿಡಿ ಪಾತ್ರಗಳನ್ನು ಮತ್ತು ಕಾಮಿಡಿ ಮಾಡುವ ಹೀರೋಗಳ ಜೊತೆ ನಟಿಸುವುದು ತೀರಾ ಕಷ್ಟ. ಅದು ಅಸಾಧ್ಯದ ಮಾತೂ ಕೂಡ. ಆದರೆ, ಹೀರೋಗಳ ಜೊತೆ ರೋಮ್ಯಾನ್ಸ್ ಮಾಡುವಂತಹ ದೃಶ್ಯಗಳಲ್ಲಿ ನಾನು ಸಲೀಸಾಗಿ ನಟಿಸಬಲ್ಲೆ ಎಂದು ಹೇಳಿದ್ದಾರೆ. ಹಾಗಾಗಿ ತಾವು ಕಾಮಿಡಿ ಪಾತ್ರಗಳನ್ನು ಒಪ್ಪಿಕೊಳ್ಳುವಾಗ ಹಿಂದೆಮುಂದೆ ನೋಡುತ್ತೇನೆ ಎಂದೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ
ಮದ್ರಾಸ್ ಕೆಫೆ ಸಿನಿಮಾದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ರಾಶಿ ಖನ್ನಾ, ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಬಹುತೇಕ ಚಿತ್ರಗಳಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಚಿತ್ರದಲ್ಲೂ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಈ ಪಾತ್ರದ ಬಗ್ಗೆ ಅವರು ಕನಸು ಕೂಡ ಕಟ್ಟಿಕೊಂಡಿದ್ದಾರಂತೆ.