ಕೋಮಲ್ ಹುಟ್ಟುಹಬ್ಬಕ್ಕೆ ‘ರೋಲೆಕ್ಸ್’ ಪೋಸ್ಟರ್

Public TV
1 Min Read
Rolex 2

ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ (Komal) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೋಮಲ್ ಜನುಮದಿನ ಉಡುಗೊರೆಯಾಗಿ ‘ರೋಲೆಕ್ಸ್’ (Rolex) ಸಿನಿಮಾದ ಸ್ಪೆಷಲ್ ಪೋಸ್ಟರ್ (Poster)  ರಿಲೀಸ್ ಮಾಡಲಾಗಿದೆ. ಸೂಟು ಬೂಟೂ ತೊಟ್ಟು ಸ್ಟೈಲೀಶ್ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಕೋಮಲ್.

Rolex 1

ಟೈಟಲ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ‘ರೋಲೆಕ್ಸ್’ಗೆ ಶ್ರೀನಿವಾಸ್ ಮಂಡ್ಯ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ (Srinivas Mandya) ಈ ಬಾರಿ  ಇಂಟ್ರಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಕೋಮಲ್ ಗೆ ಜೋಡಿಯಾಗಿ ಪಂಚತಂತ್ರ ಬ್ಯೂಟಿ ಸೋನಲ್ ಮೊಂಟೆರೋ ನಟಿಸುತ್ತಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಶಾರುಖ್ ಖಾನ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

Komal 1

ಉಳಿದಂತೆ ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ.

 

ಈಗಾಗಲೇ ಶೇಕಡಾ 50ರಷ್ಟು ರೋಲೆಕ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಉಳಿದ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ಸೆಪ್ಟಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

Web Stories

Share This Article