ಹೈದರಾಬಾದ್: ನಟಿ, ರಾಜಕಾರಣಿ ರೋಜಾ ಅವರು ತಮ್ಮ ಬಿಡುವಿಲ್ಲದ ರಾಜಕೀಯ, ಸಿನಿಮಾ ದಿನಚರಿಯ ನಡುವೆ ಮಕ್ಕಳ ಜೊತೆಗೆ ಥ್ರೋಬಾಲ್ ಆಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ರೋಜಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಗರಿ ಕ್ಷೇತ್ರದಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಅವರು ಕೂಡ ಆಟ ಆಡಿ ರೋಜಾ ಗಮನಸೆಳೆದಿದ್ದಾರೆ. ರೋಜಾ ಅವರು ಇತ್ತೀಚೆಗೆ ಅಂಡರ್-17 ಮತ್ತು 17 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗಗಳಲ್ಲಿ ಥ್ರೋಬಾಲ್ ಸ್ಪರ್ಧೆಗಳನ್ನು ಪ್ರಾರಂಭಿಸಿದ್ದಾರೆ. ಶಾಸಕಿಯಾಗಿ ಜನರೊಂದಿಗೆ ಒಬ್ಬರಾಗಿ ಬೆರೆಯುತ್ತಿರುವ ರೋಜಾ, ಇದೇ ವೇಳೆ ಅನೇಕ ಜನರ ಸಮಸ್ಯೆ ಆಲಿಸಿ ಅದನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ
ಇತ್ತೀಚೆಗಷ್ಟೇ ಚುನಾವಣಾ ಪ್ರಚಾರಕ್ಕೆ ಹೋಗಿರುವ ವೇಳೆ ಕಬಡ್ಡಿ ಅಖಾಡಲ್ಲಿ ಇಳಿದು ಆಟ ಆಡುವ ಮೂಲಕವಾಗಿ ಯುವಕರನ್ನು ಹುರಿದುಂಬಿಸಿದ್ದರು. ಆದರೆ ಇದೀಗ ಥ್ರೋಬಾಲ್ ನಲ್ಲೂ ಮಿಂಚಿದ್ದಾರೆ. ಸಿನಿಮಾ, ರಿಯಾಲಿಟಿ ಶೋ, ಕಾಮಿಡಿ ಶೋಗಳಲ್ಲಿ ತನ್ನ ದಿನನಿತ್ಯದ ತಮ್ಮ ನಗುವಿನ ಮೂಲಕ ಅಭಿಮಾನಿಗಳನ್ನು ಆಕರ್ಷಿಸುವ ರೋಜಾಗೆ ಆಟದಲ್ಲಿಯೂ ಆಸ್ತಿ ಇದೆ ಎಂಬುದು ಈ ಮೂಲಕವಾಗಿ ಗೊತ್ತಾಗಿದೆ. ಇದನ್ನೂ ಓದಿ: ಪುನೀತ್ ನಿಧನಕ್ಕೆ ಬಹುಭಾಷಾ ನಟಿ ರೋಜಾ ಕಂಬನಿ