– ದಾಖಲೆಗೆ ಬೇಕಿದೆ 3 ಸಿಕ್ಸರ್
– ಸಿಕ್ಸರ್ ಕಿಂಗ್ ಆಗಲಿರುವ ರೋಹಿತ್ ಶರ್ಮಾ
ಅಬುಧಾಬಿ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದಾಖಲೆಯ ಹೊಸ್ತಿಲಿನಲ್ಲಿ ನಿಂತಿದ್ದಾರೆ. ಇನ್ನು ಕೇವಲ 3 ಸಿಕ್ಸರ್ ಹೊಡೆದರೆ 400 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
Advertisement
ಐಪಿಎಲ್‍ನ ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್, ಇಂದು ಕೋಲ್ಕತ್ತಾ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕೋಲ್ಕತ್ತಾ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ರೆಕಾರ್ಡ್ ಹೊಂದಿರುವ ಹಿಟ್ ಮ್ಯಾನ್ ಈ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದರೆ ದಾಖಲೆ ನಿರ್ಮಿಸಲಿದ್ದಾರೆ. ಚುಟುಕು ಕ್ರಿಕೆಟ್‍ನಲ್ಲಿ 350 ಸಿಕ್ಸರ್ ಸಿಡಿಸಿರುವ ಶರ್ಮಾ ಭಾರತೀಯರಲ್ಲಿ ಮೊದಲಿಗರಾಗಿದ್ದಾರೆ. 324 ಸಿಕ್ಸರ್ ಸಿಡಿಸಿರುವ ಸುರೇಶ್ ರೈನಾ ಎರಡನೇ ಸ್ಥಾನದಲ್ಲಿದ್ದಾರೆ. 315 ಸಿಕ್ಸರ್ ಸಿಡಿಸಿರುವ ವಿರಾಟ್ 302 ಸಿಕ್ಸರ್ ಸಿಡಿಸಿರುವ ಧೋನಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್
Advertisement
Advertisement
ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕನಾಗಿರುವ ರೋಹಿತ್ ಶರ್ಮಾ, 133 ಸಿಕ್ಸರ್‍ಗಳನ್ನು ಭಾರತದ ಪರವಾಗಿ ಚುಟುಕು ಕ್ರಿಕೆಟ್ ಆಡುವಾಗ ಸಿಡಿಸಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್
Advertisement
ಸಿಕ್ಸರ್‌ಗಳ ಪಟ್ಟಿಯಲ್ಲಿ, 1043 ಸಿಕ್ಸರ್ ಸಿಡಿಸಿರುವ ಕೆರೆಬಿಯನ್ ಸ್ಟಾರ್ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. 756 ಸಿಕ್ಸರ್ ಹೊಡೆದಿರುವ ಕೀರನ್ ಪೊಲಾರ್ಡ್ ಎರಡನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ರಸೆಲ್ (509) 4ನೇ ಸ್ಥಾನದಲ್ಲಿ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ (485) 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ (467) 6ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (430) 7ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್ (399) ಭಾರತದ ರೋಹಿತ್ ಶರ್ಮಾ 397 ಸಿಕ್ಸರ್ ಸಿಡಿಸಿ ಕ್ರಮವಾಗಿ 8ನೇ ಸ್ಥಾನದಲ್ಲಿದ್ದಾರೆ.