ಮುಂಬೈ: 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. ಈ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಸಾರ್ಥಕಗೊಳಿಸಿದರು. ಬಳಿಕ ಪ್ರಧಾನಿ ಮೋದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
75 glorious years. Proud to be an Indian. Happy Independence Day to all. Jai Hind. ????????
— Virat Kohli (@imVkohli) August 15, 2022
Advertisement
ಇಡೀ ದೇಶದ ಜನರು ಮನೆ-ಮನೆಯಲ್ಲೂ ಧ್ವಜ ಹಾರಿಸುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ. ಇದಕ್ಕೆ ಭಾರತದ ಕ್ರೀಡಾ ತಾರೆಗಳೂ ಹೊರತಾಗಿಲ್ಲ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೇರಿ ಹಲವರು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ.
Advertisement
Happy Independence Day, India! Salute to our freedom fighters, soldiers, and to all the people who endlessly work to make our nation great. Blessed to be an Indian. Jai Hind. ???????? #IndependenceDay pic.twitter.com/FnQHRaGn9f
— Cheteshwar Pujara (@cheteshwar1) August 15, 2022
Advertisement
ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ರಾಷ್ಟ್ರಧ್ವಜ ಹಿಡಿದ ಫೋಟೋಗಳನ್ನು ಹಂಚಿಕೊಂಡಿದ್ದು, ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?
Advertisement
ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿರುವ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, `ನಾನು ಭಾರತೀಯನೆಂದು ಹೇಳಲು ಹೆಮ್ಮೆ ಪಡುತ್ತೇನೆ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದ್ದಾರೆ.
We should always respect our National Flag.Tricolor #HarGharTiranga https://t.co/sRoJDmeu7C pic.twitter.com/Vho1TPzhuO
— M C Mary Kom OLY (@MangteC) August 14, 2022
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಬಜನ್ ಸಿಂಗ್, ನಮ್ಮ ರಾಷ್ಟ್ರಧ್ವಜ ಹಿಂದಿನ ತ್ಯಾಗ ಬಲಿದಾನಗಳ ಸಂಕೇತ, ವರ್ತಮಾನದ ಸಮೃದ್ಧಿ ಹಾಗೂ ಭವಿಷ್ಯದ ಭರವಸೆಗಳ ಸಂಕೇತವಾಗಿದೆ ಎಲ್ಲರೂ ಅದಕ್ಕೆ ಸಲ್ಯೂಟ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: IPLನಲ್ಲಿ ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ರು – ರಾಸ್ ಟೇಲರ್ ರೋಚಕ ಅನುಭವ
Happy Independence Day ???????? pic.twitter.com/9t9B3z7dTd
— Pvsindhu (@Pvsindhu1) August 15, 2022
ಇದೇ ರೀತಿ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಚೇತೇಶ್ವರ್ ಪೂಜಾರ, ಜಸ್ಪಿತ್ ಬುಮ್ರಾ, ಶಿಖರ್ ಧವನ್, ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಬಾಕ್ಸಿಂಗ್ ಮಾಜಿ ಕ್ರೀಡಾಪಟು ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮೊದಲಾದವರು ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ.
Happy Independence Day ???????? 75 glorious years .. pic.twitter.com/zNcsNSpA9V
— Sania Mirza (@MirzaSania) August 14, 2022
ವಿದೇಶಿ ಕ್ರೀಡಾ ತಾರೆಗಳಿಂದಲೂ ವಿಶ್: ಇನ್ನೂ ಭಾರತೀಯರು ಮಾತ್ರವಲ್ಲದೇ ವಿದೇಶಿ ಕ್ರಿಕೆಟಿಗರೂ ಶುಭ ಕೋರಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಡೇರೆನ್ ಸಾಮಿ ಶುಭ ಕೋರಿದ್ದಾರೆ. ಡೇವಿಡ್ ವಾರ್ನರ್ ನನ್ನೆಲ್ಲಾ ಭಾರತೀಯ ಕುಟುಂಬದ ಸ್ನೇಹಿತರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ. ಇನ್ನೂ ಡೇರೆನ್ ಸಾಮಿ `ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು ಭಾರತದಲ್ಲೇ’ ಎಂದು ನೆನಪಿಸಿಕೊಂಡಿದ್ದಾರೆ.