ಗುವಾಹಟಿ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ರೋಹಿತ್ ಶರ್ಮಾ ಭರ್ಜರಿ ಶತಕಗಳ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿ 323 ರನ್‍ಗಳ ಬೃಹತ್ ರನ್ ಗುರಿ ನೀಡಿದ ವೆಸ್ಟ್ ಇಂಡೀಸ್‍ಗೆ ಕೇವಲ 42.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಟೀಂ ಇಂಡಿಯಾ ಭರ್ಜರಿಯಾಗಿ ಉತ್ತರ ನೀಡಿತು. ಟೀಂ ಇಂಡಿಯಾ ಪರ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೇವಲ 117 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್ ನೆರವಿನಿಂದ ಔಟಾಗದೇ 152 ರನ್ ಸಿಡಿಸಿದರು. ಇತ್ತ ನಾಯಕ ವಿರಾಟ್ ಕೊಹ್ಲಿ 107 ಎಸೆತಗಳಲ್ಲಿ 140 ರನ್ ಸಿಡಿಸಿದರು. ಇಬ್ಬರ ಜೋಡಿ 2ನೇ ವಿಕೆಟ್‍ಗೆ 200 ಪ್ಲಸ್ ರನ್ ಜೊತೆಯಾಟ ನೀಡಿದರು.
Advertisement
????????@Paytm #INDvWI pic.twitter.com/8JXdrrpm52
— BCCI (@BCCI) October 21, 2018
Advertisement
ಇದಕ್ಕು ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ಪರ ಶಿಮ್ರಾನ್ ಹೆಟ್ಮಾಯೆರ್ 106 ರನ್ ಸಿಡಿಸಿ ಶತಕ ಗಳಿಸಿದರು. ಉಳಿದಂತೆ ಕೀರನ್ ಪೊವೆಲ್ ಆಕರ್ಷಕ 51 ರನ್ ಸಿಡಿಸಿದರು. ಇಬ್ಬರ ಆಟಗಾರರ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ರನ್ 322 ಗಳಿಸಿತು. ಇದನ್ನು ಓದಿ: ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ
Advertisement
ಟೀಂ ಇಂಡಿಯಾ ಪರ ಯಜವೇಂದ್ರ ಚಹಲ್ 41 ರನ್ ನೀಡಿ 3 ವಿಕೆಟ್, 81 ರನ್ ನೀಡಿ ಶಮಿ 2 ವಿಕೆಟ್, ಜಡೇಜಾ 2, ಖಲೀಲ್ ಅಹ್ಮದ್ 1 ವಿಕೆಟ್ ಪಡೆದರು. ಪಂದ್ಯದಲ್ಲಿ 140 ರನ್ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Has there ever been a better player to have in a chase than @imVkohli? He's named as the 1st ODI Player of the Match! ???? #INDvWI pic.twitter.com/mKuZkH6yji
— ICC (@ICC) October 21, 2018