ಕೊಲಂಬೊ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಜೋಡಿಯು ಶ್ರೀಲಂಕಾ (SriLanka) ವಿರುದ್ಧ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಕೇವಲ 10 ರನ್ ಗಳಿಸಿದ್ರೂ ಹೊಸ ದಾಖಲೆಯೊಂದನ್ನ ನಿರ್ಮಿಸಿದ್ದಾರೆ.
ಹೌದು. ಕಿಂಗ್ ಕೊಹ್ಲಿ ಹಾಗೂ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಜೋಡಿ ಲಂಕಾ ವಿರುದ್ಧ 16 ಎಸೆತಗಳಲ್ಲಿ 10 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಜೊತೆಯಾಟ ಪೂರೈಸಿದ ದಾಖಲೆ ಮಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿ, ರಾಹುಲ್ ಬೆಂಕಿ ಬ್ಯಾಟಿಂಗ್, ಕುಲ್ದೀಪ್ ಮಿಂಚಿನ ಬೌಲಿಂಗ್ – ಭಾರತಕ್ಕೆ 228 ರನ್‌ಗಳ ಜಯ, ಪಾಕ್‌ಗೆ ಹೀನಾಯ ಸೋಲು
Advertisement
Advertisement
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ (ಸೆ.12) ಅತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 2 ರನ್ ಗಳಿಸುತ್ತಿದ್ದಂತೆ 5 ಸಾವಿರ ರನ್ ಜೊತೆಯಾಟ ಪೂರೈಸಿದ ರೋಹಿತ್- ಕೊಹ್ಲಿ ಜೋಡಿ ವೆಸ್ಟ್ ಇಂಡೀಸ್ ದಿಗ್ಗಜರಾದ ಗಾರ್ಡನ್ ಗ್ರೀನಿಡ್ಜ್ ಹಾಗೂ ಡಿಸ್ಮೆಂಡ್ ಹೇನ್ಸ್ ಅವರ ಹೆಸರಿನಲ್ಲಿದ್ದ ಸುದೀರ್ಘ ಕಾಲದ ಜೊತೆಯಾಟದ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಹೈವೋಲ್ಟೇಜ್ ಕದನಕ್ಕೆ ಮತ್ತೆ ಮಳೆ ಕಾಟ – ಪಾಕ್ ತಂಡದ ಹಾದಿ ಇನ್ನಷ್ಟು ಕಠಿಣವಾಗುತ್ತಾ?
Advertisement
Advertisement
ವೇಗದ 5 ಸಾವಿರ ರನ್ ಪೂರೈಸಿದ ಜೋಡಿ: ಇದರೊಂದಿಗೆ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೋಡಿ ಅತಿ ವೇಗವಾಗಿ 5 ಸಾವಿರ ರನ್ ಜೊತೆಯಾಟ ನೀಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಗಾರ್ಡನ್ ಗ್ರೀನಿಡ್ಜ್- ಡೇಸ್ಮಂಡ್ ಹೇನೆಸ್ 97 ಇನ್ನಿಂಗ್ಸ್‌ನಲ್ಲಿ, ಆಡಂ ಗಿಲ್ ಕ್ರಿಸ್ಟ್-ಮ್ಯಾಥ್ಯೂ ಹೇಡನ್ ಮತ್ತು ತಿಲಕರತ್ನೆ ದಿಲ್ಷಾನ್-ಕುಮಾರ ಸಂಗಾಕ್ಕರ ಜೋಡಿ ತಲಾ 104 ಇನ್ನಿಂಗ್ಸ್‌ಗಳಲ್ಲಿ, ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ 112 ಇನ್ನಿಂಗ್ಸ್‌ಗಳಲ್ಲಿ, ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿ ಜೋಡಿ 116 ಇನ್ನಿಂಗ್ಸ್‌ಗಳಲ್ಲಿ, ಮಹೇಲಾ ಜಯವರ್ಧನೆ-ಕುಮಾರ ಸಂಗಾಕ್ಕರ ಜೋಡಿ 123 ಇನ್ನಿಂಗ್ಸ್‌ಗಳಲ್ಲಿ ಹಾಗೂ ಮಾರ್ವನ್ ಅಟ್ಟಪಟ್ಟು-ಸನತ್ ಜಯಸೂರ್ಯ 124 ಇನ್ನಿಂಗ್ಸ್‌ಗಳಲ್ಲಿ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರೆ, ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಜೋಡಿ ಕೇವಲ 86 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: Asia Cup 2023ː ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿಂಗ್ ಕೊಹ್ಲಿ ಮತ್ತೊಂದು ಮೈಲುಗಲ್ಲು
ಒಡಿಐನಲ್ಲಿ ಅತಿ ಹೆಚ್ಚು ರನ್ ಗಳ ಜೊತೆಯಾಟ: ಇನ್ನೂ ಅತಿಹೆಚ್ಚು ರನ್‌ಗಳ ಜೊತೆಯಾಟ ನೀಡಿದವರ ಪೈಕಿ 8227 ರನ್ ಜೊತೆಯಾಟ ನೀಡಿದ ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿ ಮೊದಲ ಸ್ಥಾನದಲ್ಲಿದ್ದರೆ, ಮಹೇಲಾ ಜಯವರ್ಧನೆ-ಕುಮಾರ ಸಂಗಾಕ್ಕರ ಜೋಡಿ (5992 ರನ್ ), ತಿಲಕರತ್ನೆ ದಿಲ್ಷಾನ್-ಕುಮಾರ ಸಂಗಾಕ್ಕರ (5475 ರನ್), ಮಾರ್ವನ್ ಅಟ್ಟಪಟ್ಟು-ಸನತ್ ಜಯಸೂರ್ಯ (5462 ರನ್), ಆಡಂ ಗಿಲ್ ಕ್ರಿಸ್ಟ್-ಮ್ಯಾಥ್ಯೂ ಹೇಡನ್ (5409 ರನ್), ರೋಹಿತ್ ಶರ್ಮಾ-ಶಿಖರ್ ಧವನ್ (5193 ರನ್ ), ಗಾರ್ಡನ್ ಗ್ರೀನಿಡ್ಜ್-ಡೇಸ್ಮಂಡ್ ಹೇನೆಸ್ (5150 ರನ್), ಇದೀಗ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ (5008 ರನ್) ನಂತರದ ಸ್ಥಾನಗಳಲ್ಲಿದ್ದಾರೆ.
Web Stories