ಢಾಕಾ: ಬಾಂಗ್ಲಾದೇಶದ (Bangladesh) ವಿರುದ್ಧ ಸರಣಿ ಸೋಲಿನ ಹೊರತಾಗಿಯೂ ತಮ್ಮ ಗಾಯವನ್ನೂ ಲೆಕ್ಕಿಸದೇ, ಬೆರಳಲ್ಲಿ ರಕ್ತ ಸುರಿಯುತ್ತಿದ್ದರೂ ಕೊನೆಯವರೆಗೂ ಹೋರಾಡಿ ಸ್ಫೋಟಕ ಅರ್ಧಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಕೋಚ್ ರಾಹುಲ್ ದ್ರಾವಿಡ್ ಹಾಡಿಹೊಗಳಿದ್ದಾರೆ.
View this post on Instagram
Advertisement
ಟೀಂ ಇಂಡಿಯಾ (Team India) ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತು. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ
Advertisement
Advertisement
ಬುಧವಾರ ಬಾಂಗ್ಲಾದೇಶದ ಢಾಕಾದ ಶೇರ್-ಇ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ತಮ್ಮ ಕೈಗೆ ಪೆಟ್ಟಾಗಿಸಿಕೊಂಡರು. ಸ್ಲಿಪ್‌ನಲ್ಲಿ ಕ್ಯಾಚ್ ಹಿಡಿಯುವ ವೇಳೆ ತಮ್ಮ ಹೆಬ್ಬೆರಳಿಗೆ ಚೆಂಡನ್ನು ತಗುಲಿಸಿಕೊಂಡು ಗಾಯ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಅವರು ಮೈದಾನ ತೊರೆದಿದ್ದರು. ರೋಹಿತ್ ಶರ್ಮಾ ಅಲಭ್ಯತೆಯಿಂದಾಗಿ ಶಿಖರ್ ಧವನ್ ಜೊತೆ ವಿರಾಟ್ ಕೊಹ್ಲಿ (Virat Kohli) ಇನ್ನಿಂಗ್ಸ್ ಆರಂಭಿಸಿದ್ದರು. ಸತತ ಹೋರಾಟದ ಹೊರತಾಗಿಯೂ ಟೀಂ ಇಂಡಿಯಾ 5 ರನ್‌ಗಳಿಂದ ಸೋಲನ್ನುಕಂಡಿತು. ಈ ಮೂಲಕ ಬಾಂಗ್ಲಾದೇಶ ಸರಣಿ (ODI Series) ಗೆದ್ದುಕೊಂಡಿತು.
Advertisement
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ರೋಹಿತ್ ಶರ್ಮಾ ಅವರ ಗುಣಗಾನ ಮಾಡಿದರು. ರೋಹಿತ್ ಶರ್ಮಾ ಅವರು ಆಸ್ಪತ್ರೆಗೆ ತೆರಳಿದ್ದರೂ ಕೂಡ ಪಂದ್ಯದಲ್ಲಿ ಬ್ಯಾಟ್ ಮಾಡಲೇಬೇಕೆಂದು ಇಂಜೆಕ್ಷನ್ ಚುಚ್ಚಿಕೊಂಡು ಮತ್ತೆ ಮೈದಾನಕ್ಕೆ ಮರಳಿದರು. ಅವರ ಬೆರಳಿಗೆ ಗಂಭೀರ ಗಾಯವಾಗಿದ್ದರಿಂದ ಅವರು ಹೋಗಲೇಬೇಕಾಗಿತ್ತು. ಅವರಿಗೆ ಶ್ರೇಯಸ್ಸು ಸಲ್ಲಬೇಕು ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಕೈಯಲ್ಲಿ ರಕ್ತ ಸುರಿಸಿಕೊಂಡು ಮೈದಾನ ತೊರೆದ ರೋಹಿತ್
ಕೈಬೆರಳಿನಿಂದ ರಕ್ತ ಸುರಿಯುತ್ತಿದ್ದರೂ ಡೆತ್ ಓವರ್‌ಗಳಲ್ಲಿ ಹೋರಾಡಿದ ರೋಹಿತ್ ಶರ್ಮಾ ಟೀಂ ಇಂಡಿಯಾ ಗೆಲ್ಲಿಸಲು ಸತತವಾಗಿ ಪ್ರಯತ್ನಿಸಿದರು. 28 ಎಸೆತಗಳಲ್ಲಿ 182.14 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ರೋಹಿತ್ 5 ಸಿಕ್ಸರ್, 3 ಬೌಂಡರಿಯೊಂದಿಗೆ 51 ರನ್ ಗಳಿಸಿದರು. ಆದರೆ ಮೊಹಮ್ಮದ್ ಸಿರಾಜ್ ನಾಯಕನಿಗೆ ಸರಿಯಾಗಿ ಸಾಥ್ ನೀಡದ ಕಾರಣ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. 47 ಮತ್ತು 48ನೇ ಓವರ್‌ಗಳಿಂದ ಕೇವಲ ಒಂದೇ ಒಂದು ರನ್ ತಂಡಕ್ಕೆ ಸೇರ್ಪಡೆಯಾಯಿತು. ಇದು ಪಂದ್ಯದ ಮೇಲೆ ಗಂಭೀರ ಪರಿಣಾಮ ಬೀರಿತು.