ನವದೆಹಲಿ: ವಿಶ್ವಕಪ್‍ನ ನಂತರ ಭಾರತ ಮೂರು ಮಾದರಿಯ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‍ಗೆ ತೆರಳಲಿದೆ. ಈ ಪಂದ್ಯಗಳಲ್ಲಿ ಏಕದಿನ ತಂಡವನ್ನು ಉಪನಾಯಕ ರೋಹಿತ್ ಶರ್ಮಾ ಮುನ್ನೆಡಸಲಿದ್ದು, ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ-ಟ್ವಿಂಟಿ ಪಂದ್ಯಗಳನ್ನು ಆಡಲಿದೆ. ಮೊದಲು ಟಿ-ಟ್ವಿಂಟಿ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಎರಡು ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಲಿವೆ. ನಂತರ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು ಇದರ ನಾಯಕತ್ವವನ್ನು ರೋಹಿತ್ ವಹಿಸಲಿದ್ದಾರೆ. ಒಂದು ವೇಳೆ ಕೊಹ್ಲಿಗೆ ವಿಶ್ರಾಂತಿ ನೀಡಿದರೆ ವೆಸ್ಟ್ ಇಂಡೀಸ್‍ನಲ್ಲಿ ನಡೆಯುವ ಎರಡು ಟೆಸ್ಟ್ ಪಂದ್ಯಗಳಿಗೆ ಅಜಿಂಕ್ಯ ರಹಾನೆ ನಾಯಕರಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
Advertisement
Advertisement
ನಿರಂತರ ಪಂದ್ಯಗಳನ್ನು ಆಡುತ್ತಿರುವುದರಿಂದ ಕೊಹ್ಲಿಗೆ ಮುಂದಿನ ಪಂದ್ಯಗಳು ಹೊರೆ ಎನಿಸಬಹುದು. ಮತ್ತು ಅವರು ಪಂದ್ಯದ ವೇಳೆ ಗಾಯದ ಸಮಸ್ಯೆಗೆ ತುತ್ತಾಗಬಹುದು ಎಂಬ ನಿಟ್ಟಿನಲ್ಲಿ ಅವರಿಗೇ ವಿಶ್ರಾಂತಿ ನೀಡಲಾಗಿದೆ ಎನ್ನಲಾಗಿದೆ.
Advertisement
ನಾಯಕ ಕೊಹ್ಲಿ ಅವರ ಜೊತೆಗೆ ವಿಶ್ವದ ನಂಬರ್ ಒನ್ ವೇಗಿ ಜಸ್ಪ್ರಿತ್ ಬುಮ್ರಾ ಅವರಿಗೂ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಕಳೆದ ಎರಡು ವರ್ಷಗಳಲ್ಲಿ ಈ ಇಬ್ಬರು ಆಟಗಾರು ಎಲ್ಲಾ ಮೂರು ಮಾದರಿಯ ಪಂದ್ಯಗಳಲ್ಲೂ ಆಟವಾಡಿದ್ದಾರೆ. ಅದ್ದರಿಂದ ಇಬ್ಬರಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಇದಕ್ಕೂ ಮುನ್ನ ಕೊಹ್ಲಿ ಮತ್ತು ಬುಮ್ರಾ ಅವರನ್ನು ಕೇವಲ ಏಕದಿನ ಪಂದ್ಯಗಳಿಗೇ ಮಾತ್ರ ವಿಶ್ರಾಂತಿ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಈಗ ಆಗಸ್ಟ್ 22 ರಿಂದ ಆರಂಭವಾಗುವ ಎರಡು ಟೆಸ್ಟ್ ಪಂದ್ಯಗಳಿಗೂ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಕೊಹ್ಲಿ ಬುಮ್ರಾ ಎಲ್ಲಾ ಮಾದರಿಯಲ್ಲೂ ಉತ್ತಮವಾಗಿ ಆಡುತ್ತಿದ್ದಾರೆ. ಅದ್ದರಿಂದ ಅವರು ಈಗ ವಿಶ್ರಾಂತಿ ನೀಡಿದರೆ ಮುಂದೆ ತವರಿನಲ್ಲಿ ನಡೆಯುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗಬಹುದು ಎನ್ನುವ ಆಲೋಚನೆಯನ್ನು ಆಯ್ಕೆ ಸಮಿತಿ ಹೊಂದಿದೆ ಎನ್ನಲಾಗಿದೆ.
ಸದ್ಯ ಇಂಗ್ಲೆಂಡ್‍ನಲ್ಲಿ ಇರುವ ಭಾರತದ ಆಟಗಾರರು ಜುಲೈ 14ರ ನಂತರ ಭಾರತಕ್ಕೆ ವಾಪಸ್ ಆಗಲಿದ್ದು, ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ವಿಶ್ವಕಪ್ ನಂತರ ನಿವೃತ್ತಿ ಹೊಂದುತ್ತಾರೆ ಎನ್ನಲಾಗಿದ್ದ ಮಾಜಿ ನಾಯಕ ಧೋನಿ ವೆಸ್ಟ್ ಇಂಡೀಸ್ ಪಂದ್ಯಗಳಿಗೆ ಲಭ್ಯವಿರುವ ಬಗ್ಗೆ ಯಾವ ಸ್ಪಷ್ಟತೆ ಸಿಕ್ಕಿಲ್ಲ.