ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

Public TV
3 Min Read
Rohit Sharma

– ಮೀಸಲು ಆಟಗಾರನಾಗಿ ರಿಂಕು ಆಯ್ಕೆ ಬಗ್ಗೆ ರೋಹಿತ್‌, ಅಗರ್ಕರ್‌ ನೀಡಿದ ಸ್ಪಷ್ಟನೆ ಏನು?

ಮುಂಬೈ: ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ಆಯ್ಕೆ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹಾಗೂ ರೋಹಿತ್‌ ಶರ್ಮಾ (Rohit Sharma) ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿ ಸ್ಟ್ರೈಕ್‌ರೇಟ್‌? ಮೀಸಲು ಆಟಗಾರನಾಗಿ ರಿಂಕು ಆಯ್ಕೆ, ತಂಡದಿಂದ ಕೆ.ಎಲ್‌ ರಾಹುಲ್‌ (KL Rahul) ಅವರನ್ನು ಕೈಬಿಟ್ಟಿದ್ದೇಕೆ? ಈ ಎಲ್ಲ ವಿಚಾರಗಳ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಮ್ಯಾಚ್‌ ಫಿನಿಷರ್‌ ರಿಂಕು ಸಿಂಗ್‌ಗೆ ಏಕೆ ಅವಕಾಶ ನೀಡಲಾಗಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಕೆ.ಎಲ್‌ ರಾಹುಲ್‌ ಕೈಬಿಟ್ಟಿದ್ದೇಕೆ?
ಸದ್ಯ ಐಪಿಎಲ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೆ.ಎಲ್‌ ರಾಹುಲ್‌ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದರೆ ನಮಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಗತ್ಯತ್ತು. ಆದ್ದರಿಂದ ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ರಾಹುಲ್‌ಗೆ ಮುಂದೆ ಉತ್ತಮ ಅವಕಾಶಗಳಿವೆ ಎಂದು ರೋಹಿತ್‌, ಅಗರ್ಕರ್‌ ತಿಳಿಸಿದ್ದಾರೆ.

ರಿಂಕು ಸಿಂಗ್‌ ಅವರನ್ನು ಕಡೆಗಣಿಸಿದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್ ಮಾತನಾಡಿ, ರಿಂಕು ಸಿಂಗ್‌ ಅವರನ್ನು ಕೈ ಬಿಟ್ಟ ನಿರ್ಧಾರ ಕಠಿಣವಾಗಿತ್ತು. ಏಕೆಂದರೆ, ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ಕಂಡೀಷನ್ಸ್ ಬಗ್ಗೆ ನಮಗೆ ಗೊತ್ತಿಲ್ಲ. ಈ ಕಾರಣದಿಂದ ನಾವು ಹೆಚ್ಚಿನ ಬೌಲಿಂಗ್‌ ಆಯ್ಕೆಗಳನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ.

KL Rahul 1

ರಿಂಕು ತಪ್ಪು ಮಾಡಿಲ್ಲ:
ಆಯ್ಕೆಯ ಸಂಧರ್ಭದಲ್ಲಿ ನಾವು ಕೆಲ ಕಠಿಣ ಸಂಗತಿಗಳನ್ನು ಎದುರಿಸಿದ್ದೇವೆ. ರಿಂಕು ಸಿಂಗ್‌ (Rinku Singh) ಯಾವುದೇ ತಪ್ಪು ಮಾಡಿಲ್ಲ ಹಾಗೂ ಶುಭಮನ್ ಗಿಲ್‌ ಕೂಡ ಅಷ್ಟೇ. ಇಲ್ಲಿ ಸಂಯೋಜನೆ ಪ್ರಮುಖ ಸಂಗತಿಯಾಗಿದೆ. ಅಲ್ಲಿನ ಕಂಡೀಷನ್ಸ್ ಹೇಗಿದೆ? ಎಂದು ನಮಗೆ ಇನ್ನೂ ಗೊತ್ತಿಲ್ಲ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ. ಟಿ20 ವಿಶ್ವಕಪ್‌ ಭಾರತ ತಂಡದಿಂದ ರಿಂಕು ಸಿಂಗ್‌ ಅವರನ್ನು ಕೈ ಬಿಟ್ಟಿರುವುದು ಅನಿರೀಕ್ಷಿತ ಕರೆ. ಏಕೆಂದರೆ, ಹೆಚ್ಚುವರಿ ಬೌಲರ್ ಇದ್ದರೆ, ನಮಗೆ ಟೂರ್ನಿಯಲ್ಲಿ ನೆರವಾಗಬಹುದು ಎಂಬುದು ನಮ್ಮ ತಂತ್ರವಾಗಿದೆ ಹಾಗಾಗಿ ನಾಲ್ವರು ಸ್ಪಿನ್ನರ್‌ಗಳನ್ನು ಉಳಿಸಿಕೊಂಡಿದ್ದೇವೆ ಎಂದು ಅಗರ್ಕರ್‌ ಹೇಳಿದ್ದಾರೆ.

TEAM INDIA 3

ರಿಂಕು ಸಿಂಗ್ ರೀತಿ ಬ್ಯಾಕೆಂಡ್‌ನಲ್ಲಿ ಸ್ಪೋಟಕ ಬ್ಯಾಟ್‌ ಮಾಡುವ ಆಟಗಾರ ಇಲ್ಲವೆಂದು ನಾನು ನಂಬುತ್ತೇನೆ. ರಿಂಕು ಆಯ್ಕೆಯಾಗದೇ ಇರಲು ಅವರದು ಯಾವುದೇ ತಪ್ಪಿಲ್ಲ. ಗರಿಷ್ಠ 15 ಆಟಗಾರರಲ್ಲಿ ಇಬ್ಬರು ವಿಕೆಟ್‌ ಕೀಪರ್‌ಗಳೇ ಭಯಾನಕ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಈ ಕಾರಣದಿಂದಾಗಿಯೇ ಹಚ್ಚುವರಿ ಬೌಲರ್‌ಗಳನ್ನು ತೆಗೆದುಕೊಂಡಿದ್ದೇವೆ. ಆದರೆ, ಮೀಸಲು ಆಟಗಾರನಾಗಿ ಅವರು ತಂಡದ ಜೊತೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ದಿನದಾಂತ್ಯಕ್ಕೆ ತಂಡಕ್ಕೆ ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬೇಕಾಗುತ್ತದೆ ಎಂದು ಅಜಿತ್‌ ಅಗರ್ಕರ್‌ (Ajit Agarkar) ತಿಳಿಸಿದ್ದಾರೆ.

TEAM INDIA

ಕೊಹ್ಲಿ ಸಮರ್ಥಿಸಿಕೊಂಡ ಅಗರ್ಕರ್‌:
ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ದೊಡ್ಡ ಮಟ್ಟದ ಸ್ಕೋರ್ ಮಾಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ ಆಯ್ಕೆದಾರರು ಈ ವರ್ಷದ ಆರಂಭದಲ್ಲಿ ಅವರನ್ನು ಟಿ20ಐ ತಂಡಕ್ಕೆ ಮರಳಿ ಕರೆಸಿಕೊಳ್ಳುವ ಮೊದಲು ತಂಡದ ಬೇಡಿಕೆಗಳಿಗೆ ಅನುಗುಣವಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಹೇಳಲಾಗಿತ್ತು. ಅದೇ ಷರತ್ತಿನ ಮೇರೆಗೆ ಅವರಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ರೋಹಿತ್‌ ಅವರನ್ನೂ ಕೇಳಲಾಗಿತ್ತು. ಆದರೆ, ಅವರು ಜೋರಾಗಿ ನಕ್ಕು ಇದೊಂದು ಚರ್ಚೆಯ ವಿಷಯವೇ ಅಲ್ಲ ಎಂಬುದಾಗಿ ಹೇಳಿದ್ದಾರೆ.

Share This Article