ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರು ಜುಲೈ 7 ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ.
ನಿನ್ನೆಯಷ್ಟೇ ಅವರ ಕೊರೊನಾ ಫಲಿತಾಂಶ ನೆಗೆಟಿವ್ ವರದಿ ಬಂದಿದ್ದು, ಕ್ವಾರಂಟೈನ್ ಮುಗಿಸಿ ಹೊರಬಂದಿದ್ದಾರೆ. ಅವರು ಇದೇ ಜುಲೈ 7ರಂದು ನಡೆಯಲಿರುವ ಟಿ20 ಸರಣಿಗೆ ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್
ಇಂಗ್ಲೆಂಡ್ ಟೆಸ್ಟ್ ಆರಂಭಕ್ಕೂ ಮುನ್ನ ಲೀಸೆಸ್ಟರ್‌ಶೈರ್ ಎದುರಿನ ಅಭ್ಯಾಸ ಪಂದ್ಯದ 2ನೇ ದಿನ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಯಿತು. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ಮೇಲೆ ಹಲವು ದೂರು ದಾಖಲು
ಜುಲೈ 5ಕ್ಕೆ ಅಂತಿಮ ಟೆಸ್ಟ್ ಮುಕ್ತಾಯಗೊಳ್ಳಲಿದ್ದು, ಜುಲೈ 7ರಿಂದ T20 ಸರಣಿ ಆರಂಭವಾಗಲಿದೆ. ಮೊದಲ T20 ಪಂದ್ಯವು ಇಂಗ್ಲೆಂಡ್‌ನ ರೋಸ್ ಬೌಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.