ಇಂದೋರ್: ಅಫ್ಘಾನಿಸ್ತಾನದ (Afghanistan) ವಿರುದ್ಧ ನಡೆಯುತ್ತಿರುವ ಮೂರು ಟಿ20 ಸರಣಿಯ 2ನೇ ಭಾನುವಾರ (ಜ.14) ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 7 ಗಂಟೆ ವೇಳೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನಾಡುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮಹತ್ವದ ಮೈಲುಗಲ್ಲು ಸಾಧಿಸಲಿದ್ದಾರೆ. ಅದಕ್ಕಾಗಿ ಪಂದ್ಯ ಆರಂಭಕ್ಕೂ ಮುನ್ನವೇ ನೆಟ್ಸ್‌ನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ.
Advertisement
2ನೇ ಟಿ20 ಪಂದ್ಯವನ್ನಾಡುವ ಮೂಲಕ 150ನೇ ಟಿ20 ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ಅತಿಹೆಚ್ಚು ಟಿ20 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟಿಗ, ಟೀಂ ಇಂಡಿಯಾದ (Team India) ಮೊದಲ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್
Advertisement
Advertisement
ಅಫ್ಘಾನಿಸ್ತಾನದ ವಿರುದ್ಧ ಜ.11 ರಂದು ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ರನೌಟ್ ಆದರು. ಈ ಪಂದ್ಯದಲ್ಲಿ ಶಿವಂ ದುಬೆ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಭಾರತಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟರು. ಸೂಪರ್ ಸಂಡೇ 2ನೇ ಪಂದ್ಯ ನಡೆಯಲಿದ್ದು, ಸರಣಿ ಗೆಲ್ಲುವ ತವಕದಲ್ಲಿ ಭಾರತ ತಂಡ ಕಾಯುತ್ತಿದೆ.
Advertisement
2007ರ ಸೆಪ್ಟೆಂಬರ್ 17 ರಂದು ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹಿಟ್‌ಮ್ಯಾನ್, ಇದುವರೆಗೂ ಆಡಿರುವ 149 ಪಂದ್ಯಗಳಿಂದ 4 ಶತಕ ಹಾಗೂ 29 ಅರ್ಧಶತಕದೊಂದಿಗೆ 3,853 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ – ಭಾರತ ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಬೆಳ್ಳಿಯಪ್ಪ
T20I ಟಾಪ್ ಸ್ಕೋರರ್ ಯಾರು?
ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಖ್ಯಾತಿ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 115 ಪಂದ್ಯಗಳಲ್ಲಿ 1 ಶತಕ, 37 ಅರ್ಧ ಶತಕಗಳೊಂದಿಗೆ 4,008 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 148 ಪಂದ್ಯಗಳಲ್ಲಿ 3853 ರನ್ ಗಳಿಸಿರುವ ರೋಹಿತ್ ಶರ್ಮಾ (4 ಶತಕ, 29 ಅರ್ಧಶತಕ) 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಕಿವೀಸ್‌ನ ಮಾರ್ಟಿನ್ ಗಪ್ಟಿಲ್ 122 ಪಂದ್ಯಗಳಲ್ಲಿ 3,531 ರನ್, ಪಾಕಿಸ್ತಾನದ ಬಾಬರ್ ಆಜಂ 104 ಪಂದ್ಯಗಳಲ್ಲಿ 3,485 ರನ್ ಹಾಗೂ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಖೇಲೋ ಇಂಡಿಯಾಗೆ ಆಯ್ಕೆ – ಕ್ರೀಡಾಧಿಕಾರಿ, ವಿದ್ಯಾರ್ಥಿಗಳನ್ನು ಮೆರವಣಿಯೊಂದಿಗೆ ಬರಮಾಡಿಕೊಂಡ ಬೆಳ್ಳಾರೆ ಜನತೆ
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯವಾಡಿದ ಟಾಪ್-5 ಪ್ಲೇಯರ್ಸ್:
* 149 ಪಂದ್ಯ- ರೋಹಿತ್ ಶರ್ಮಾ- ಭಾರತ-3,853 ರನ್
* 134 ಪಂದ್ಯ- ಪಾಲ್ ಸ್ಟ್ರರ್ಲಿಂಗ್- ಐರ್ಲೆಂಡ್- 3,438 ರನ್
* 128 ಪಂದ್ಯ- ಜಾರ್ಜ್ ಡೊಕ್ರೆಲ್- ಐರ್ಲೆಂಡ್- 969 ರನ್
* 124 ಪಂದ್ಯ- ಶೋಯೆಬ್ ಮಲಿಕ್- ಪಾಕಿಸ್ತಾನ- 2,435 ರನ್
* 122 ಪಂದ್ಯ- ಮಾರ್ಟಿನ್ ಗಪ್ಟಿಲ್- ನ್ಯೂಜಿಲೆಂಡ್- 3,531 ರನ್