Connect with us

Cricket

ಶತಕದೊಂದಿಗೆ ವಿಶ್ವದಾಖಲೆ ಬರೆದ ‘ಹಿಟ್ ಮ್ಯಾನ್’

Published

on

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದ ರೋಹಿತ್ ಶರ್ಮಾ ಟೆಸ್ಟ್ ನ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಸದ್ಯ ರಾಂಚಿಯಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಟೀಂ ಇಂಡಿಯಾಗೆ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ, ಸರಣಿಯಲ್ಲಿ 3ನೇ ಹಾಗೂ ಟೆಸ್ಟ್ ವೃತ್ತಿ ಜೀವನದ 6ನೇ ಶತಕ ಸಿಡಿಸಿದ್ದರು. 130 ಎಸೆತಗಳಲ್ಲೇ ರೋಹಿತ್ ಶತಕ ಸಿಡಿಸಿದ್ದು ವಿಶೇಷವಾಗಿದ್ದು, ಒಟ್ಟಾರೆ 164 ಎಸೆತ ಎದುರಿಸಿ 14 ಬೌಂಡರಿ, 4 ಸಿಕ್ಸರ್ ಗಳೊಂದಿಗೆ 117 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸಿಕ್ಸರ್ ವಿಶ್ವದಾಖಲೆ: ರೋಹಿತ್ ಶರ್ಮಾ ಪಂದ್ಯದ ಮೊದಲ ದಿನದಾಟದ ವೇಳೆ 4 ಶತಕಗಳನ್ನು ಸಿಡಿಸಿದ್ದು, ಆ ಮೂಲಕ ಟೆಸ್ಟ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದರು. ಇದುವರೆಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ರೋಹಿತ್ 17 ಸಿಕ್ಸರ್ ಸಿಡಿಸಿದ್ದಾರೆ. 2018 ಬಾಂಗ್ಲಾ ವಿರುದ್ಧ ಶಿಮ್ರಾನ್ ಹೆಟ್ಮಾಯರ್ 15 ಸಿಕ್ಸರ್ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಉಳಿದಂತೆ ವಾಸೀಂ ರಾಜಾ 1977ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 14 ಸಿಕ್ಸರ್, ಆಂಡ್ರ್ಯೂ ಫ್ಲಿಂಟಾಫ್ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ಮ್ಯಾಥ್ಯೂವ್ ಹೇಡನ್ ಜಿಂಬಾಂಬೆ ವಿರುದ್ಧ 14 ಸಿಕ್ಸರ್ ಸಿಡಿಸಿದ್ದರು. ಭಾರತದ ಪರ 2010-11ರ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹರ್ಭಜನ್ ಸಿಂಗ್ 14 ಸಿಕ್ಸರ್ ಸಿಡಿಸಿದ್ದರು.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಮಯಾಂಕ್ 10 ರನ್, ಪೂಜಾರಾ ಡಕೌಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದರು. ಆ ಬಳಿಕ ಬಂದ ನಾಯಕ ಕೊಹ್ಲಿ ಕೂಡ 12 ರನ್ ಗಳಿಸಿ ಔಟಾಗುವುದರೊಂದಿಗೆ ತಂಡ 39 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ಈ ಇಬ್ಬರ ಜೋಡಿ ಮುರಿಯದ 4ನೇ ವಿಕೆಟ್‍ಗೆ 185 ರನ್ ಗಳಿಸಿದೆ. ರಹಾನೆ 135 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ನೊಂದಿಗೆ 83 ರನ್ ಗಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *