ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್‌ – ಹಿಟ್‌ಮ್ಯಾನ್‌ಗೆ ಆಫರ್‌ ಕೊಟ್ಟಿದ್ಯಾರು?

Public TV
3 Min Read
Rohit Sharma 2

ಮುಂಬೈ: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವನ್ನು ಸೇರಿಕೊಳ್ಳುವಂತೆ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ (Rohit Sharma) ಅವರಿಗೆ ವಿಶೇಷ ಆಹ್ವಾನ ಬಂದಿದೆ. ಆದ್ರೆ ಇದು ಆರ್‌ಸಿಬಿ ಫ್ರಾಂಚೈಸಿ ನೀಡಿದ ಆಹ್ವಾನವಲ್ಲ. ಹಾಗಿದ್ದರೆ, ಮತ್ತ್ಯಾರು ಅನ್ನೋ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಹೌದು. ನವೆಂಬರ್‌ 30ರಂದು ದುಬೈನಲ್ಲಿ 2025ರ ಐಪಿಎಲ್‌ಗೆ ಮೆಗಾ ಹರಾಜು ನಡೆಸಲು ಈಗಾಗಲೇ ಬಿಸಿಸಿಐ ಸಕಲ ತಯಾರಿ ನಡೆಸಿದೆ. ಅದಕ್ಕಾಗಿ ಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ರಿಟೇನ್‌ ಆಟಗಾರರ ಪಟ್ಟಿಯನ್ನು ಅ.31ರ ಒಳಗೆ ಪ್ರಕಟಿಸುವಂತೆ ಬಿಸಿಸಿಐ (BCCI) ಡೆಡ್‌ಲೈನ್‌ ಫಿಕ್ಸ್‌ ಮಾಡಿದೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವ್ಯ ಪಟ್ಟಿಯನ್ನು ಈಗಾಗಲೇ ಸಿದ್ಧ ಮಾಡಿಕೊಂಡಿವೆ.

RCB 2

ಮತ್ತೊಂದೆಡೆ ರೋಹಿತ್‌ ಶರ್ಮಾ ಅವರು ಮುಂಬೈ ಇಂಡಿಯನ್ಸ್‌ನಲ್ಲೇ ಉಳಿಯುತ್ತಾರೆ ಎನ್ನಲಾಗುತ್ತಿದೆಯಾದರೂ ಆರ್‌ಸಿಬಿ ಬಲೆ ಬೀಸಿದೆ ಎಂಬ ಸುದ್ದಿ ಮತ್ತೊಂದೆಡೆ ಹರಿದಾಡುತ್ತಿದೆ. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

CSK vs RCB 2

ಸದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ರೋಹಿತ್‌ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್‌ ಗ್ರೌಂಡ್‌ನಿಂದ ಡ್ರೆಸ್ಸಿಂಗ್‌ ರೂಮಿನತ್ತ ತೆರಳುತ್ತಿದ್ದಾಗ ಅಭಿಮಾನಿಯೊಬ್ಬರು ʻರೋಹಿತ್‌ ಭಾಯ್‌ ನೆಕ್ಸ್ಟ್‌ ಐಪಿಎಲ್‌ನಲ್ಲಿ ಯಾವ ಟೀಂ?ʼ ಎಂದು ಕೇಳಿದ್ದಾರೆ. ಅದಕ್ಕೆ ರೋಹಿತ್‌ ʻಯಾವ್‌ ಟೀಂಗೆ ಬರಬೇಕು ಹೇಳು?ʼ ಎನ್ನುತ್ತಾ ಮುಂದಕ್ಕೆ ಹೋಗುವಾಗ ʻಆರ್‌ಸಿಬಿಗೆ ಬನ್ನಿ ಭಾಯ್‌, ಲವ್‌ ಯು ಭಾಯ್‌ʼ ಎಂದು ಕೇಳಿಕೊಂಡಿದ್ದಾರೆ. ಈ ಕುರಿತ ವೀಡಿಯೋ ತುಣುಕೊಂದು ಎಕ್ಸ್‌ ಖಾತೆಯಲ್ಲಿ ಹರಿದಾಡುತ್ತಿದೆ.

MUMBAI INDIANS

2013ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಸೇರಿದ ರೋಹಿತ್‌ ಶರ್ಮಾ, ತಂಡಕ್ಕಾಗಿ 5 ಬಾರಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಆದ್ರೆ ಕಳೆದ ಆವೃತ್ತಿಯಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಮುಂಬೈ ಲೀಗ್‌ ಸುತ್ತಿನಲ್ಲೇ ಹೀನಾಯವಾಗಿ ಸೋತು ಹೊರಬಿದ್ದಿತ್ತು. ಇತ್ತ 17 ಆವೃತ್ತಿ ಕಳೆದರೂ ಒಂದು ಬಾರಿಯೂ ಟ್ರೋಫಿ ಗೆಲ್ಲದ ಆರ್‌ಸಿಬಿ ಹಿಟ್‌ ಮ್ಯಾನ್‌ ಅವರನ್ನು ತಂಡಕ್ಕೆ ಕರೆತರುವ ಪ್ರಯತ್ನ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: IND vs NZ Test | 4ನೇ ದಿನವೂ ಮಳೆಯಾಟ – ಸೋಲಿನ ಸುಳಿಯಲ್ಲಿ ಭಾರತ

10 ಫ್ರಾಂಚೈಸಿಗಳ ಸಂಭಾವ್ಯ ಪಟ್ಟಿ ಹೀಗಿದೆ…
* ಚೆನ್ನೈ ಸೂಪರ್ ಕಿಂಗ್ಸ್:
ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಡೇರಿಲ್‌ ಮಿಚೆಲ್, ಮತೀಶ ಪತಿರಣ, ಎಂ.ಎಸ್ ಧೋನಿ

* ಮುಂಬೈ ಇಂಡಿಯನ್ಸ್:
ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅನ್ಶುಲ್ ಕಾಂಬೋಜ್

* ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಯಶ್ ದಯಾಳ್

* ರಾಜಸ್ಥಾನ್ ರಾಯಲ್ಸ್:
ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಸಂದೀಪ್ ಶರ್ಮಾ

* ಕೋಲ್ಕತ್ತಾ ನೈಟ್ ರೈಡರ್ಸ್:
ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಫಿಲ್ ಸಾಲ್ಟ್, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ

* ಗುಜರಾತ್ ಟೈಟಾನ್ಸ್:
ಶುಭಮನ್ ಗಿಲ್, ರಶೀದ್ ಖಾನ್, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ

* ಲಕ್ನೋ ಸೂಪರ್ ಜೈಂಟ್ಸ್:
ಕೆ.ಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಾರ್ಕಸ್ ಸ್ಟೊಯಿನಿಸ್, ಮಯಾಂಕ್ ಯಾದವ್

* ಡೆಲ್ಲಿ ಕ್ಯಾಪಿಟಲ್ಸ್‌:
ರಿಷಬ್ ಪಂತ್, ಟ್ರಿಸ್ಟಾನ್ ಸ್ಟಬ್ಸ್, ಮಿಚೆಲ್ ಮಾರ್ಷ್, ಜೇಕ್ ಫ್ರೇಸರ್-ಮೆಕ್‌ ಗಾರ್ಕ್‌, ಅಕ್ಷರ್‌ ಪಟೇಲ್, ಅಭಿಷೇಕ್ ಪೊರೆಲ್

* ಪಂಜಾಬ್ ಕಿಂಗ್ಸ್:
ಸ್ಯಾಮ್ ಕುರ್ರಾನ್, ಅರ್ಷ್‌ದೀಪ್‌ ಸಿಂಗ್, ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್‌, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ

* ಸನ್‌ರೈಸರ್ಸ್ ಹೈದರಾಬಾದ್:
ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಟಿ. ನಟರಾಜನ್, ನಿತೀಶ್ ಕುಮಾರ್ ರೆಡ್ಡಿ.

Share This Article