ಅಹ್ಮದಾಬಾದ್: ದೇಶವೇ ಎದುರು ನೋಡುತ್ತಿರುವ ವಿಶ್ವಕಪ್ ಮಹಾಸಮರಕ್ಕೆ (World Cup Final) ಕ್ಷಣಗಣನೆ ಬಾಕಿಯಿದೆ. ಟೀಂ ಇಂಡಿಯಾ (Team India) ವಿಶ್ವ ಸಾಮ್ರಾಟನಾಗಿ ಮೆರೆದಾಡುವುದನ್ನು ಕಣ್ತುಂಬಿಕೊಳ್ಳಲು 140 ಕೋಟಿ ಭಾರತೀಯರು ಕಾದು ಕುಳಿತಿದ್ದಾರೆ.
Advertisement
ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಭಾನುವಾರ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ (ನ.18) ಗುಜರಾತ್‌ನ ಗಾಂಧಿನಗರಕ್ಕೆ ಸಮೀಪವಿರುವ ಅಡಾಲಾಜ್ ಸ್ಟೆಪ್‌ವೆಲ್ (Adalaj Stepwell) ಪ್ರವಾಸಿ ತಾಣದಲ್ಲಿ ಸಾಂಪ್ರದಾಯಿಕವಾಗಿ ವಿಶ್ವಕಪ್‌ನೊಂದಿಗೆ ಪ್ರೀ ಫೋಟೋಶೂಟ್ ನಡೆಸಲಾಗಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ವಿಶ್ವಕಪ್‌ನೊಂದಿಗೆ ಫೋಟೋಶೂಟ್ ಮಾಡಿಸಲಾಗಿದೆ. ಈ ಫೋಟೋಗಳು ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಟೀಂ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಇಂಡೋ-ಆಸೀಸ್ ರೋಚಕ ಫೈನಲ್ ವೀಕ್ಷಿಸಲಿದ್ದಾರೆ ಮೋದಿ – ಸೂಪರ್ ಸಂಡೇ ಏನೆಲ್ಲಾ ಸ್ಪೆಷಲ್ ಇದೆ ಗೊತ್ತಾ..?
Advertisement
Advertisement
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ಆರಂಭಕ್ಕೂ ಮುನ್ನವೇ 2 ಗಂಟೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಹಲವು ನೃತ್ಯಪಟುಗಳು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬೀಡುಬಿಟ್ಟಿದ್ದು, ಸ್ಫೂರ್ತಿ ಗೀತೆಗಳಿಗೆ ನೃತ್ಯ ಅಭ್ಯಾಸ ನಡೆಸುತ್ತಿದ್ದಾರೆ. ಅದಕ್ಕಾಗಿ ʻಜೀತೇಗ ಇಂಡಿಯಾ ಜೀತೇಗ’ ವಿಶೇಷ ಗೀತೆಯನ್ನೂ ಸಿದ್ಧಪಡಿಸಲಾಗಿದೆ. ಅಲ್ಲದೇ ಬಾಲಿವುಡ್ ತಾರೆಯರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮಗಳೂ ನಡೆಯಲಿವೆ. ಇದಕ್ಕೂ ಮುನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ಫೈನಲ್ ಸಮಾರಂಭದಲ್ಲಿ ಭಾರತೀಯ ವಾಯುಪಡೆಯಿಂದ ವಿಶೇಷ ಏರ್‌ಶೋ ಪ್ರದರ್ಶನ ನಡೆಸಿಕೊಡಲಿದೆ. ಇದು ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ.
Advertisement
ಮೋದಿಯೇ ಮುಖ್ಯ ಆಕರ್ಷಣೆ: ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಜರಾಗಲಿದ್ದಾರೆ. ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದ್ದು, ರೋಚಕ ಪಂದ್ಯ ವೀಕ್ಷಿಸಲು 1.30 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ. ಈ ವೇಳೆ ಹಲವಾರು ಗಣ್ಯರು ಮೈದಾನದಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಗಣ್ಯರೊಂದಿಗೆ ಫೈನಲ್ ಪಂದ್ಯ ವೀಕ್ಷಿಸಲಿದ್ದಾರೆ. ಇದನ್ನೂ ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ
ಏನೇನು ವಿಶೇಷ..?
ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ವಾಯುಪಡೆಯು ವಿಶೇಷ ಏರ್ ಶೋ ಪ್ರದರ್ಶನ ನಡೆಸಿಕೊಡಲಿದೆ. ಇದರೊಂದಿಗೆ ಖ್ಯಾತ ಬಾಲಿವುಡ್ ತಾರೆಯರು ಮೋದಿ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ತರಲಿದ್ದಾರೆ. ನೃತ್ಯ, ಸಂಗೀತ, ವಿಶೇಷ ಲೈಟಿಂಗ್ ಶೋ ಕಾರ್ಯಕ್ರಮಗಳು ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೀತೇಗ ಇಂಡಿಯಾ ಜೀತೇಗ – ವಿಶ್ವ ಮಹಾಸಮರಕ್ಕೆ ಮೋದಿ ಅಂಗಳ ಸಜ್ಜು, ಕೋಟ್ಯಂತರ ಅಭಿಮಾನಿಗಳ ಕಾತರ!