ಚೆನ್ನೈ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ವಿಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಮಹತ್ವದ ದಾಖಲೆ ಬರೆಯುವ ಸನೀಹದಲ್ಲಿದ್ದಾರೆ.
ರೋಹಿತ್ ಈಗಾಗಲೇ ಟಿ20 ಮಾದರಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು. ಭಾನುವಾರ ನಡೆಯುಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ 67 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನ ಮಾಡಲಿದ್ದಾರೆ. ಸದ್ಯ ರೋಹಿತ್ ಶರ್ಮಾ 2,203 ರನ್ ಗಳಿಸಿದ್ದು, ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ ರನ್ನು ಹಿಂದಿಕ್ಕಲು ಕೇವಲ 67 ರನ್ ಗಳಿಸಬೇಕಿದೆ. ರೋಹಿತ್ ಈ ಸಾಧನೆ ಮಾಡಿದರೆ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಭಾರತೀಯರೆ ಅತಿಹೆಚ್ಚು ರನ್ ಗಳಿಸಿದ ಆಟಗಾರರು ಎನಿಸಿಕೊಳ್ಳಲಿದ್ದಾರೆ. ಸಚಿನ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ.
Advertisement
Advertisement
ಉಳಿದಂತೆ ಟಿ20 ಮಾದರಿಯಲ್ಲಿ ಪಾಕಿಸ್ತಾನದ ಶೋಯಿಬ್ ಮಲಿಕ್ 108 ಪಂದ್ಯಗಳಿಂದ 2,190 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್ ಬ್ರೆಂಡನ್ ಮೆಕಲಮ್ 71 ಪಂದ್ಯಗಳಿಂದ 2,140 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 62 ಪಂದ್ಯಗಳಿಂದ 2,102 ರನ್ ಸಿಡಿಸಿದ್ದಾರೆ.
Advertisement
ಭಾರತದ ಪರ ಸುರೇಶ್ ರೈನಾ 1,605 ರನ್, ಧೋನಿ 1.487 ರನ್, ಯುವರಾಜ್ ಸಿಂಗ್ 1,177 ರನ್ ಗಳಿಸಿದ್ದಾರೆ. ರೋಹಿತ್ ಟಿ20 ಮಾದರಿಯಲ್ಲಿ 4 ಶತಕಗಳನ್ನು ಸಿಡಿಸಿದ ಸಾಧನೆಯನ್ನು ಮಾಡಿದ್ದು, ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರೋಹಿತ್, ಧವನ್ ಜೋಡಿ 123 ಸಿಡಿಸಿದ್ದು, ಇದುವರೆಗೂ 39 ಇನ್ನಿಂಗ್ಸ್ ಗಳಿಂದ ಈ ಜೋಡಿ 1,154 ರನ್ ಸಿಡಿಸಿದೆ. ಈ ಪಟ್ಟಿಯಲ್ಲಿ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್ , ಶೇನ್ ವ್ಯಾಟ್ಸನ್ ಜೋಡಿ 37 ಇನ್ನಿಂಗ್ಸ್ ಗಳಿಂದ 1,154 ರನ್ ಗಳಿಸಿ ಮುಂಚೂಣಿಯಲ್ಲಿದೆ.
Advertisement
ವಿಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಟಿ20 ಟೂರ್ನಿಯಲ್ಲಿ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಟೀಂ ಸರಣಿ ಇಂಡಿಯಾ ಕ್ಲೀನ್ ಸ್ವಿಪ್ ಮಾಡುವತ್ತ ಗಮನ ಹರಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews