ಇವನ್ಯಾರು ಬ್ರಾಡ್ಮನ್? ಪೋಸ್ಟ್‌ಗೆ ಲೈಕ್ ಮಾಡಿದ ರೋಹಿತ್ ಶರ್ಮಾ

Public TV
2 Min Read
KL RAHUL

– ರಾಹುಲ್ ಕುಟುಕಿದ ಹಿಟ್‍ಮ್ಯಾನ್‍ಗೆ ಅಭಿಮಾನಿಗಳ ಕ್ಲಾಸ್

ಮುಂಬೈ: ಟೀಂ ಇಂಡಿಯಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಸಾಮಾಜಿಕ ಜಾಲತಾಣದ ಮೂಲಕ ಹೊರ ಬರುತ್ತಿದ್ದು, ಈ ಹಿಂದೆ ಇನ್‍ಸ್ಟಾದಲ್ಲಿ ಕೊಹ್ಲಿ ಅವರನ್ನ ಅನ್ ಫಾಲೋ ಮಾಡಿದ್ದ ರೋಹಿತ್ ಶರ್ಮಾ, ಈ ಬಾರಿ ಕೆಎಲ್ ರಾಹುಲ್ ವಿರುದ್ಧ ಮಾಡಲಾಗಿದ್ದ ಪೋಸ್ಟಿಗೆ ಲೈಕ್ ಒತ್ತಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್‍ರ ಕಳಪೆ ಪ್ರದರ್ಶನದ ಕುರಿತು ಮಾಡಲಾಗಿದ್ದ ಇನ್‍ಸ್ಟಾ ಪೋಸ್ಟಿಗೆ ರೋಹಿತ್ ಲೈಕ್ ಮಾಡಿದ್ದು, ಟೆಸ್ಟ್ ಕ್ರಿಕೆಟಿನಲ್ಲಿ ರಾಹುಲ್ 35 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, ಆದರೆ ಕೆಲವರಿಗೆ ರಾಹುಲ್ ಭಾರತದ ತಂಡದ ಡ್ರಾನ್ ಬ್ರಾಡ್ಮನ್. 40 ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ ರೋಹಿತ್ ಮಾತ್ರ ಟೆಸ್ಟ್ ಪಂದ್ಯದಲ್ಲಿ ಸ್ಥಾನವಿಲ್ಲ ಎಂದು ಪೋಸ್ಟಿನಲ್ಲಿ ಬರೆಯಲಾಗಿದೆ.

Rohit Sharma 3

ರೋಹಿತ್‍ರ ಈ ನಡೆಗೆ ಕಿಡಿಕಾರಿರುವ ಕೆಲ ಅಭಿಮಾನಿಗಳು, ಮೊದಲು ಅನುಷ್ಕಾ ಶರ್ಮಾ ವಿರುದ್ಧದ ಪೋಸ್ಟಿಗೆ ಲೈಕ್ ಮಾಡಿದ್ದ ರೋಹಿತ್, ಸದ್ಯ ಕೆಎಲ್ ರಾಹುಲ್ ವಿರುದ್ಧದ ಪೋಸ್ಟಿಗೆ ಲೈಕ್ ಮಾಡಿದ್ದಾರೆ. ಇದರ ಬದಲು ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ರನ್‍ಗಳಿಸಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಒಳಿತು ಎಂದು ಕಿವಿಮಾತು ಹೇಳಿದ್ದಾರೆ.

2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ, ಮೊದಲ ಶತಕದಲ್ಲೇ 177 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆ ಬಳಿಕ ಮುಂಬೈನಲ್ಲಿ ನಡೆದ ಪಂದ್ಯದಲ್ಲೂ ಶತಕ ಸಿಡಿಸಿ ಸಂಭ್ರಮಿಸಿದ್ದರು. ತವರು ನೆಲದಲ್ಲಿ ಸರಾಸರಿ 85.44 ಸರಾಸರಿಯಲ್ಲಿ 85.44 ರನ್ ಸಿಡಿಸಿದ್ದ ರೋಹಿತ್, ವಿದೇಶಿ ನೆಲದಲ್ಲಿ ನಡೆದ ಟೂರ್ನಿಗಳಲ್ಲಿ ಮಿಂಚಲು ವಿಫಲರಾಗಿದ್ದರು. 18 ಪಂದ್ಯಗಳಿಂದ 26.72ರ ಸರಾಸರಿಯಲ್ಲಿ ಕೇವಲ 816 ರನ್ ಮಾತ್ರ ಸಿಡಿಸಿದ್ದಾರೆ. 32 ವರ್ಷದ ರೋಹಿತ್ ಶರ್ಮಾ ಕಳೆದ ವರ್ಷದ ಡಿಸೆಂಬರಿನಲ್ಲಿ ಆಸೀಸ್ ವಿರುದ್ಧ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಇದುವರೆಗೂ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಹಿತ್ 39.62 ಸರಾಸರಿಯಲ್ಲಿ 1,585 ರನ್ ಗಳಿಸಿದ್ದಾರೆ.

ROHIT a

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಆ ಬಳಿಕ ನಡೆದ ವೆಸ್ಟ್ ಇಂಡೀಸ್ ಟೆಸ್ಟ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದರು. ಆದರೆ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಡುವ 11ರ ಬಳಗದಲ್ಲಿ ರೋಹಿತ್ ಅವರಿಗೆ ಅವಕಾಶ ಲಭಿಸಿರಲಿಲ್ಲ. ಪರಿಣಾಮ ಕೆಲ ಅಭಿಮಾನಿಗಳು ರೋಹಿತ್ ಅವರಿಗೆ ಅವಕಾಶ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾರಿಗೆ ಅವಕಾಶ ನೀಡದಿರುವ ಕುರಿತು ಕೆಲ ಅಭಿಮಾನಿಗಳು ಕಿಡಿಕಾರಿದ್ದರು. ಅಲ್ಲದೇ ಸತತ ವೈಫಲ್ಯಗಳ ನಡುವೆಯೂ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಕೆಎಲ್ ರಾಹುಲ್ ಬೆನ್ನಿಗೆ ತಂಡದ ನಾಯಕ ಕೊಹ್ಲಿ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟಿನ ಮೊದಲ ಹಾಗೂ 2ನೇ ಇನ್ನಿಂಗ್ಸ್ ನಲ್ಲಿ ಕ್ರಮವಾಗಿ 44, 38 ರನ್ ಗಳಿಸಿದ್ದ ರಾಹುಲ್, ಅದನ್ನು ಅರ್ಧ ಶತಕವಾಗಿ ಪರಿವರ್ತಿಸಲು ವಿಫಲರಾಗಿದ್ದರು. 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 13 ರನ್ ಮಾತ್ರ ಗಳಿಸಿದ್ದರು. ಇದುವರೆಗೂ 35 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್, 35.48 ಸರಾಸರಿಯಲ್ಲಿ 1987 ರನ್ ಗಳಿಸಿದ್ದಾರೆ.

KL RAHUL

Share This Article
Leave a Comment

Leave a Reply

Your email address will not be published. Required fields are marked *