ಸರಣಿಗೂ ಮುನ್ನವೇ ಪೊಲಾರ್ಡ್ ವಿರುದ್ಧ ರೋಹಿತ್ ಗರಂ

Public TV
2 Min Read
collage Rohit Sharma Kieron pollard

ನವದೆಹಲಿ: ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು, ವೆಸ್ಟ್ ಇಂಡೀಸ್ ಸರಣಿಗೂ ಮುನ್ನವೇ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ವಿರುದ್ಧ ಗರಂ ಆಗಿದ್ದಾರೆ.

ಮುಂದಿನ ತಿಂಗಳು ಡಿಸೆಂಬರ್ 6 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಸೆಣಸಡಲಿದ್ದು, ಇದಕ್ಕೂ ಮುನ್ನವೇ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ರೋಹಿತ್ ಪೊಲಾರ್ಡ್ ಟ್ವಿಟ್ಟರ್ ನಲ್ಲಿ ಸಿಟ್ಟಾಗಿದ್ದಾರೆ.

ಮುಂಬರುವ ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿಗೆ ಅಭಿಮಾನಿಗಳನ್ನು ಸೆಳೆಯಲು ಸ್ಟಾರ್ಸ್ ಸ್ಪೋರ್ಟ್ ವಾಹಿನಿ ಒಂದು ಜಾಹೀರಾತನ್ನು ರೆಡಿ ಮಾಡಿದೆ. ಈ ಜಾಹೀರಾತಿನಲ್ಲಿ ಮಲಗಿದ್ದ ರೋಹಿತ್ ಶರ್ಮಾ ಅವರಿಗೆ ಬೆಳಗ್ಗೆ ನಾಲ್ಕು ಗಂಟೆಯ ವೇಳೆ ಒಂದು ಕರೆ ಬರುತ್ತದೆ. ಇದಕ್ಕೆ ಉತ್ತರಿಸಿದ ರೋಹಿತ್‍ಗೆ, ಇದು ವೇಕಪ್ ಕಾಲ್. ಪೊಲಾರ್ಡ್ ಈ ಕರೆ ಮಾಡಲು ಹೇಳಿದರು ಎನ್ನುವ ಧ್ವನಿ ಕೇಳುತ್ತದೆ. ಈ ಕಾಲ್ ಬಂದ ಕೂಡಲೇ ಕೋಪಗೊಂಡ ರೋಹಿತ್ ಫೋನ್ ಅನ್ನು ಟೇಬಲ್‍ಗೆ ಕುಕ್ಕುತ್ತಾರೆ.

ಈ ವಿಡಿಯೋವನ್ನು ಕೀರನ್ ಪೊಲಾರ್ಡ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಗುಡ್ ಮಾರ್ನಿಂಗ್ ಬ್ರೋಹಿತ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಸರಣಿಗೆ ನಿಮಗೆ ವೇಕಪ್ ಕಾಲ್ ಬಂದಿದೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಪೊಲಾರ್ಡ್ ಅವರ ಈ ಟ್ವೀಟ್ ಗೆ ಕಮೆಂಟ್ ಮಾಡಿರುವ ರೋಹಿತ್ ಶರ್ಮಾ ಮೂರು ಕೆಂಪು ಬಣ್ಣದ ಕೋಪಗೊಂಡ ಎಮೋಜಿ ಹಾಕಿದ್ದಾರೆ. ಈ ಟ್ವೀಟ್ ಬಳಿಕ ಪೊಲಾರ್ಡ್ ರೋಹಿತ್ ಶರ್ಮಾ ಅವರನ್ನು ಅನ್‍ಫಾಲೋ ಮಾಡಿದ್ದಾರೆ.

ಮೊದಲು ಉಭಯ ತಂಡಗಳ ನಡುವಿನ ಮೊದಲ ಟಿ-20 ಡಿಸೆಂಬರ್ 6 ರಂದು ಹೈದರಾಬಾದ್‍ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಮುಂದಿನ ಎರಡು ಪಂದ್ಯಗಳು ತಿರುವನಂತಪುರಂ (ಡಿಸೆಂಬರ್ 8) ಮತ್ತು ಮುಂಬೈ ವಾಖೆಂಡೆ ಮೈದಾನದಲ್ಲಿ (ಡಿಸೆಂಬರ್ 11) ನಡೆಯಲಿವೆ. ನಂತರ ಮೂರು ಏಕದಿನ ಪಂದ್ಯಗಳು ಚೆನ್ನೈ (ಡಿಸೆಂಬರ್ 15), ವಿಶಾಖಪಟ್ಟಣಂ (ಡಿಸೆಂಬರ್ 18) ಮತ್ತು ಕಟಕ್ (ಡಿಸೆಂಬರ್ 22) ನಲ್ಲಿ ನಡೆಯಲಿವೆ.

ಭಾರತದ ಏಕದಿನ ತಂಡ
ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್, ಶಿವಮ್ ದುಬೆ, ಕೇದರ್ ಜಾಧವ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕಲದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

ಭಾರತದ ಟಿ-20 ತಂಡ
ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ) ಸಂಜು ಸ್ಯಾಮ್ಸನ್, ಕೆ.ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕಲದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

Share This Article
Leave a Comment

Leave a Reply

Your email address will not be published. Required fields are marked *