ಬೆಂಗಳೂರು: ಟೀಂ ಇಂಡಿಯಾದ ನಾಯಕ, ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Crciket) ವಿಶೇಷ ಸಾಧನೆ ಮಾಡಿದ್ದಾರೆ.
ಈ ವಿಶ್ವಕಪ್‌ನ ಪವರ್ ಪ್ಲೇನಲ್ಲಿ (Power Play) 250ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರನಾಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಈ ಟೂರ್ನಿಯಲ್ಲಿ 2 ಅರ್ಧಶತಕ, ಒಂದು ಶತಕವನ್ನು ಹಿಟ್‌ಮ್ಯಾನ್ ಸಿಡಿಸಿದ್ದಾರೆ. ರೋಹಿತ್ ಬ್ಯಾಟಿನಿಂದ ಇಲ್ಲಿಯವರೆಗೆ 22 ಸಿಕ್ಸ್, 50 ಬೌಂಡರಿ ಸಿಡಿಯಲ್ಪಟ್ಟಿದೆ.
Advertisement
Advertisement
ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪೈಕಿ ರೋಹಿತ್ ಶರ್ಮಾ 5ನೇ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಒಟ್ಟು 8 ಪಂದ್ಯಗಳಿಂದ 442 ರನ್ ಹೊಡೆದಿದ್ದಾರೆ. ಇದನ್ನೂ ಓದಿ: ಪಾಕ್ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್ ಅಂತರದಲ್ಲಿ ಗೆದ್ದರೆ ಸೆಮಿಸ್ ತಲುಪಬಹುದು?
Advertisement
ನ್ಯೂಜಿಲೆಂಡ್‌ನ ರಚಿನ್ ರವೀಂದ್ರ (Rachin Ravindra) 565 ರನ್ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 550 ರನ್ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.
Advertisement
ವಿರಾಟ್ ಕೊಹ್ಲಿ (Virat Kohli) 543 ರನ್ ಹೊಡೆಯುವ ಮೂಲಕ 3ನೇ ಸ್ಥಾನ ಪಡೆದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 446 ರನ್ ಹೊಡೆಯುವ ಮೂಲಕ 4ನೇ ಸ್ಥಾನ ಪಡೆದಿದ್ದಾರೆ.
ಭಾರತದ ಪರ ಏಕದಿನ ಪಂದ್ಯದಲ್ಲಿ 300ಕ್ಕೂ ಅಧಿಕ ಸಿಕ್ಸರ್ (Sixer) ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಈಗಾಗಲೇ ಪಾತ್ರರಾಗಿದ್ದಾರೆ.