– ಜ.11ರಿಂದ ಟಿ20 ಅಫ್ಘಾನ್ ವಿರುದ್ಧ ಟಿ20 ಸರಣಿ
– ಟೀಂ ಇಂಡಿಯಾಕ್ಕೆ ರೋಹಿತ್ ಸಾರಥಿ, ಕೊಹ್ಲಿ ಕಂಬ್ಯಾಕ್
ಮುಂಬೈ: ಅಫ್ಘಾನಿಸ್ತಾನ (Afghanistan) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಜನವರಿ 11 ರಿಂದ ಪ್ರಾರಂಭಗೊಳ್ಳಲಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮಹತ್ವದ ಮೈಲುಗಲ್ಲು ಸ್ಥಾಪಿಸುಲು ಸಜ್ಜಾಗಿದ್ದಾರೆ.
ಹೌದು. ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಆಗಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20I Cricket) 4,000 ರನ್ ಪೂರೈಸುವ ಸನಿಹದಲ್ಲಿದ್ದಾರೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ 147 ರನ್ ಪೂರೈಸಿದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,000 ರನ್ ಪೂರೈಸಿದ ವಿಶ್ವದ ಹಾಗೂ ಭಾರತದ 2ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,000 ರನ್ ಪೂರೈಸಿದ ಟಾಪ್ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ.
Advertisement
Advertisement
T20I ಟಾಪ್ ಸ್ಕೋರರ್ ಯಾರು?
ಕೊಹ್ಲಿ 115 ಪಂದ್ಯಗಳಲ್ಲಿ 1 ಶತಕ, 37 ಅರ್ಧ ಶತಕಗಳೊಂದಿಗೆ 4,008 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 148 ಪಂದ್ಯಗಳಲ್ಲಿ 3853 ರನ್ ಗಳಿಸಿರುವ ರೋಹಿತ್ ಶರ್ಮಾ (4 ಶತಕ, 29 ಅರ್ಧಶತಕ) 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಕಿವೀಸ್‌ನ ಮಾರ್ಟಿನ್ ಗಪ್ಟಿಲ್ 122 ಪಂದ್ಯಗಳಲ್ಲಿ 3,531 ರನ್, ಪಾಕಿಸ್ತಾನದ ಬಾಬರ್ ಆಜಂ 104 ಪಂದ್ಯಗಳಲ್ಲಿ 3,485 ರನ್ ಹಾಗೂ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್ ಮೊಹಮ್ಮದ್ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?
Advertisement
Advertisement
ಈಗಾಗಲೇ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ರೋಹಿತ್ ಶರ್ಮಾ ಅವರಿಗೆ ಮತ್ತೆ ಟಿ20 ಪಂದ್ಯಗಳಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ಇದನ್ನೂ ಓದಿ: 2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?
ಅಫ್ಘಾನ್ ವಿರುದ್ಧ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್.
ಸರಣಿ ಎಲ್ಲಿ ಯಾವಾಗ?
ಇದೇ ಜನವರಿ 11 ರಿಂದ ಸರಣಿ ಪ್ರಾರಂಭವಾಗಲಿದ್ದು, ಮೊದಲ ಟಿ20 ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಜ.14 ರಂದು ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ 2ನೇ ಪಂದ್ಯ ನಡೆಯಲಿದೆ. ಜನವರಿ 17 ರಂದು ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇದು ಭಾರತ ತಂಡಕ್ಕೆ ಕೊನೆಯ ಚುಟುಕು ಅಂತಾರಾಷ್ಟ್ರೀಯ ಸರಣಿಯಾಗಿರಲಿದೆ. ಹಾಗಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಸೇರ್ಪಡೆಯಾದ 10 ದಿನದಲ್ಲೇ ವೈಎಸ್‌ಆರ್ ಕಾಂಗ್ರೆಸ್‌ಗೆ ಅಂಬಟಿ ರಾಯಡು ಗುಡ್‌ಬೈ