ಭೋಪಾಲ್: ಸಿಕ್ಸರ್, ಬೌಂಡರಿಗಳ ಸುರಿಮಳೆಯೊಂದಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) 1,101 ದಿನಗಳ ಬಳಿಕ ಅಂದರೆ 3 ವರ್ಷಗಳ ಬಳಿಕ ಶತಕದ ಬರ ನೀಗಿಸಿಕೊಂಡಿದ್ದಾರೆ.
1⃣0⃣1⃣ Runs
8⃣5⃣ Balls
9⃣ Fours
6⃣ Sixes
Leading from the front – the @ImRo45 way ???? ???? #TeamIndia | #INDvNZ | @mastercardindia
Watch his majestic TON ???? ????https://t.co/S10ONsMMLI pic.twitter.com/iJIGbOKShx
— BCCI (@BCCI) January 24, 2023
Advertisement
ಇಂದೋರ್‌ನ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 85 ಎಸೆತಗಳಲ್ಲಿ 101 ರನ್ ಬಾರಿಸಿದ್ದಾರೆ. 6 ಸಿಕ್ಸರ್, 9 ಬೌಂಡರಿಗಳು ಇದರಲ್ಲಿ ಸೇರಿವೆ. ಇದನ್ನೂ ಓದಿ: ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್
Advertisement
Advertisement
2020ರ ಜನವರಿ 19ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೊನೆಯ ಶತಕ ಸಿಡಿಸಿದ್ದರು. ಇಂದು 83 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಇದು ಅವರ 2ನೇ ವೇಗದ ಶತಕವಾಗಿದೆ. ಇದನ್ನೂ ಓದಿ: T20I TEAM OF THE YEAR 2022: ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ
Advertisement
ಅಲ್ಲದೇ 1,101 ದಿನಗಳ ಬಳಿಕ 30ನೇ ಶತಕ ಸಿಡಿಸಿದ ಶರ್ಮಾ ಹೊಸ ದಾಖಲೆಯನ್ನೂ ಬರೆದಿದ್ದಾರೆ. ಆಸ್ಟ್ರೇಲಿಯಾ ಕೋಚ್ ಆಗಿರುವ ರಿಕ್ಕಿಪಾಟಿಂಗ್ ಏಕದಿನ ಕ್ರಿಕೆಟ್‌ನಲ್ಲಿ 30 ಶತಕ ಸಿಡಿಸಿ, ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ 3ನೇ ಆಟಗಾರನಾಗಿದ್ದರು. ಇದೀಗ ರೋಹಿತ್ ಶರ್ಮಾ, ರಿಕ್ಕಿ ಪಾಟಿಂಗ್ ಅವರ ಶತಕ ಸಾಧನೆಯನ್ನ ಸರಿಗಟ್ಟಿದ್ದಾರೆ. ಆದರೆ ರಿಕ್ಕಿ ಪಾಂಟಿಂಗ್ 365 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ ಶರ್ಮಾ 234 ಇನ್ನಿಂಗ್ಸ್‌ಗಳಲ್ಲೇ ಸಾಧನೆ ಮಾಡಿರುವುದು ವಿಶೇಷ.
ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ ಉತ್ತಮ ಶುಭಾರಂಭ ಪಡೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ (Shubman Gill) ಜೋಡಿ 212 ರನ್‌ಗಳ ಜೊತೆಯಾಟವಾಡಿತು.
ಏಕದಿನ ಕ್ರಿಕೆಟ್‌ನ ಸೆಂಚುರಿ ಸ್ಟಾರ್ಸ್
- ಸಚಿನ್ ತೆಂಡೂಲ್ಕರ್ – 79 ಶತಕ, 452 ಇನ್ನಿಂಗ್ಸ್
- ವಿರಾಟ್ ಕೊಹ್ಲಿ – 46 ಶತಕ, 261 ಇನ್ನಿಂಗ್ಸ್
- ರೋಹಿತ್ ಶರ್ಮಾ – 30 ಶತಕ, 234 ಇನ್ನಿಂಗ್ಸ್
- ರಿಕ್ಕಿ ಪಾಂಟಿಂಗ್ – 30 ಶತಕ, 365 ಇನ್ನಿಂಗ್ಸ್
- ಸನತ್ ಜಯಸೂರ್ಯ – 28 ಶತಕ, 433 ಇನ್ನಿಂಗ್ಸ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k