ವಿಶಾಖಪಟ್ಟಣಂ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವರದಿಗಳಿಗೆ ವಿರಾಟ್ ಕೊಹ್ಲಿ ಪೂರ್ಣವಿರಾಮ ಹಾಕಿದ್ದಾರೆ.
ಹೌದು, ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ಮುನ್ನವೇ ಟೀಂ ಇಂಡಿಯಾ ಆಟಗಾರರಲ್ಲಿ ಮನಸ್ತಾಪವಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಹೊರನಡೆದ ಬಳಿಕ ಈ ವರದಿಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಹ ಬೆಳವಣಿಗೆಗಳು ನಡೆದಿದ್ದವು. ಈ ವರದಿಗಳನ್ನು ಕೊಹ್ಲಿ, ವೆಸ್ಟ್ ಇಂಡೀಸ್ ಸರಣಿಯಗೂ ಮುನ್ನವೇ ಅಲ್ಲಗೆಳೆದಿದ್ದರು. ಆದರೂ ಕೆಲ ಅವರು ಈ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ನೀಡದ್ದಕ್ಕೆ ಅಭಿಮಾನಿಗಳು ಕ್ಯಾಪ್ಟನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
Advertisement
'Insecure' Kohli standing there to applaud his innings
yes i m proud of this insecure kohli pic.twitter.com/JHowvMNCuv
— ????????????♡ (@VkAsStan) October 3, 2019
Advertisement
ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಟೆಸ್ಟ್ ಸರಣಿಯಲ್ಲಿ ರೋಹಿತ್‍ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಿದ್ದು, ಆರಂಭಿಕ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ರೋಹಿತ್‍ರ ಈ ಪ್ರದರ್ಶನಕ್ಕೆ ತಂಡದ ನಾಯಕರಾಗಿ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದು, ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ಔಟಾಗಿ ತಂಡದ ಕೊಠಡಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕೊಠಡಿಯ ಬಾಗಿಲನ್ನು ತೆರೆದಿಟ್ಟು ಚಪ್ಪಾಳೆಯೊಂದಿಗೆ ಸ್ವಾಗತ ಕೋರಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೊಹ್ಲಿಯ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಇಬ್ಬರ ನಡುವಿನ ಮನಸ್ತಾಪಕ್ಕೆ ಕೊಹ್ಲಿ ಫುಲ್ ಸ್ಟಾಪ್ ಹಾಕಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
https://twitter.com/ivarunkrishnan4/status/1179768843910209537
Advertisement
ರೋಹಿತ್ ಶರ್ಮಾರನ್ನು ಟೆಸ್ಟ್ ತಂಡದ ಆರಂಭಿಕರಾಗಿ ಕಣಕ್ಕೆ ಇಳಿಸುವ ಬಗ್ಗೆ ಇದೇ ಸಂದರ್ಭದಲ್ಲಿ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸುವ ಚಿಂತನೆಯನ್ನು ಏಕಾಏಕಿ ಕೈಗೊಂಡಿಲ್ಲ. ಹಲವು ಸಮಯದಿಂದ ಈ ಆಯ್ಕೆ ಬಗ್ಗೆ ಸಮಿತಿ ಚಿಂತನೆ ನಡೆಸಿತ್ತು. ಏಕೆಂದರೆ ರೋಹಿತ್ 2018 ರಿಂದ ಟೀಂ ಇಂಡಿಯಾ ಅಡಿದ್ದ 17 ಟೆಸ್ಟ್ ಪಂದ್ಯಗಳ ಪೈಕಿ ರೋಹಿತ್ ಕೇವಲ 4 ಪಂದ್ಯಗಳನ್ನು ಆಡಿದ್ದರು. ತಂಡದಲ್ಲಿ ಸ್ಥಾನ ಪಡೆಯಲು ರಹಾನೆ, ಹಾರ್ದಿಕ್ ಪಾಂಡ್ಯ, ಹನುಮ ವಿಹಾರಿ ನಡುವೆಯೇ ಭಾರೀ ಪೈಪೋಟಿ ಉಂಟಾಗಿತ್ತು. ಈ ಸಂದರ್ಭದಲ್ಲಿ ರೋಹಿತ್‍ಗೆ ಆರಂಭಿಕ ಸ್ಥಾನ ನೀಡಿರುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಿಂದ ಏಕಾಏಕಿ ಆರಂಭಿಕರಾಗಿ ಕಣಕ್ಕೆ ಇಳಿಸುವುದರಿಂದ ರೋಹಿತ್ ಮೇಲಾಗುವ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಆ ಬಳಿಕ ಅವರಿಗೆ ಆರಂಭಿಕರಾಗಿ ಅವಕಾಶ ನೀಡಿ ಆಟಕ್ಕೆ ಹೊಂದಿಕೊಳ್ಳಲು ಸಮಯ ನೀಡಲು ಆಯ್ಕೆ ಸಮಿತಿ ಮುಂದಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ರೋಹಿತ್ ಶರ್ಮಾರ ಈ ಕಮ್ ಬ್ಯಾಕ್ ಇನ್ನಿಂಗ್ಸ್‍ಗೆ ಕೊಹ್ಲಿ ಮಾತ್ರವಲ್ಲದೇ ತಂಡದ ಕೋಚ್ ರವಿಶಾಸ್ತ್ರಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿರೊಂದಿಗೆ ಆಟಗಾರರ ಕೊಠಡಿಯಿಂದ ಹೊರ ನಿಂತಿದ್ದ ತಂಡದ ಕೋಚ್ ಬಳಗ ಕೂಡ ಚಪ್ಪಾಳೆಯೊಂದಿಗೆ ರೋಹಿತ್‍ಗೆ ಸ್ವಾಗತ ಕೋರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದಲ್ಲಿ 244 ಎಸೆತಗಳಲ್ಲಿ 72.13 ಸರಾಸರಿಯೊಂದಿಗೆ ರೋಹಿತ್ 176 ರನ್ ಗಳಿಸಿ ಔಟಾಗಿದ್ದರು. ಅಲ್ಲದೇ ಮತ್ತೊಬ್ಬ ಆರಂಭಿಕ ಮಯಾಂಕ್ ಅಗರ್ವಾಲ್ ರೊಂದಿಗೆ 217 ರನ್ ಗಳ ಜೊತೆಯಾಟ ನೀಡುವ ಮೂಲಕ ದಾಖಲೆ ಬರೆದಿದ್ದರು.
https://www.instagram.com/p/B3JQ5Bpgu__/