Connect with us

Cricket

ರೋ’ಹಿಟ್’ ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತಕ್ಕೆ ಭರ್ಜರಿ ಜಯ

Published

on

ರಾಜ್‍ಕೋಟ್: ನಾಯಕ ರೋಹಿತ್ ಶರ್ಮಾ ಸಿಕ್ಸರ್ , ಬೌಂಡರಿ ಸುರಿಮಳೆ ಆಟದಿಂದ ಭಾರತ ಎರಡನೇ ಟಿ20 ಪಂದ್ಯವನ್ನು‌ ಭಾರತ 8 ವಿಕೆಟ್ ಗಳಿಂದ ಭರ್ಜರಿ‌ ಜಯ ಸಾಧಿಸಿದ್ದು, ಮೂರು‌ ಪಂದ್ಯಗಳ ಸರಣಿ ಸಮಬಲಗೊಂಡಿದೆ.

ಬಾಂಗ್ಲಾ ನೀಡಿದ 154 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 15.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು.

ತನ್ನ 100 ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ರೋಹಿತ್ ಶರ್ಮಾ ತಾನು ಹಿಟ್ ಮ್ಯಾನ್ ಎನ್ನುವುದನ್ನು ಮತ್ತೊಮ್ಮೆ ತೋರಿಸಿದರು. 23 ಎಸೆತಗಳಲ್ಲಿ ಅರ್ಧ ಶತಕ ಹೊಡೆತ ರೋಹಿತ್ 85 ರನ್ (43 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಶತಕದಿಂದ ವಂಚಿತರಾದರು. ತನ್ನ ಅತ್ಯುತ್ತಮ ಆಟಕ್ಕಾಗಿ‌ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ರೋಹಿತ್ ಬ್ಯಾಟಿಂಗ್ ಆರ್ಭಟ ಹೇಗಿತ್ತು ಅಂದರೆ 5.2 ಓವರ್ ಗಳಲ್ಲಿ 50 ರನ್ ಬಂದರೆ, 9.2 ಓವರ್ ಗಳಲ್ಲಿ ಭಾರತ 100 ರನ್ ಗಳಿಸಿತು. ನಾಯಕನಿಗೆ ಉತ್ತಮ ಸಾಥ್ ನೀಡಿದ ಶಿಖರ್ ಧವನ್ 31 ರನ್ (27 ಎಸೆತ, 4 ಬೌಂಡರಿ) ಹೊಡೆದರು. ಇವರಿಬ್ಬರು ಮೊದಲ ವಿಕೆಟಿಗೆ 11.5 ಓವರ್ ಗಳಲ್ಲಿ 118 ರನ್ ಜೊತೆಯಾಟವಾಡಿ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿದರು.

ಕೊನೆಯಲ್ಲಿ ಕೆ.ಎಲ್. ರಾಹುಲ್ ಔಟಾಗದೇ 8 ರನ್, ಶ್ರೇಯಸ್ ಅಯ್ಯರ್ ಔಟಾಗದೇ 24 ರನ್ (13 ಎಸೆತ, 3 ಬೌಂಡರಿ,1 ಸಿಕ್ಸರ್) ಹೊಡೆದರು. ಕೊನೆಯ ಟಿ 20 ಪಂದ್ಯ ಭಾನುವಾರ ನಡೆಯಲಿದೆ

Click to comment

Leave a Reply

Your email address will not be published. Required fields are marked *