ಆಡಿಲೇಡ್: ಟಿ20 ವಿಶ್ವಕಪ್(T20 World Cup) ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್(England) ವಿರುದ್ಧ ಹೀನಾಯ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ(Rohit Sharma) ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಡಗೌಟ್‌ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ತಲೆಯನ್ನು ಕೆಳಗೆ ಹಾಕಿ ಬೇಸರ ವ್ಯಕ್ತಪಡಿಸುತ್ತಿದ್ದಾಗ ಕೋಚ್ ದ್ರಾವಿಡ್ ಸಮಾಧಾನ ಮಾಡಿದ್ದಾರೆ.
Advertisement
Please god, I'm begging, give me all the pain of my @ImRo45, but pls don't do this to him. ????????????https://t.co/zHeoTOB6kW
— V I S H A L (@ImVi47) November 10, 2022
Advertisement
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ರಾಹುಲ್ ವಿಕೆಟ್ ಕಳೆದುಕೊಂಡರೂ ನಂತರ ರೋಹಿತ್ ಮತ್ತು ಕೊಹ್ಲಿ ನಿಧಾನವಾಗಿ ಆಡಿ ಇನ್ನಿಂಗ್ಸ್ ಕಟ್ಟಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ 160ರ ಗಡಿ ದಾಟಿತ್ತು. ಅಂತಿಮವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು.
Advertisement
ಸವಾಲಿನ ಮೊತ್ತವೇ ಆಗಿದ್ದರೂ ಭಾರತದ ಬೌಲರ್‌ಗಳಿಂದ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಬೌಂಡರಿ, ಸಿಕ್ಸರ್ ಸಿಡಿಸಿ ತಂಡವನ್ನು ಫೈನಲಿಗೆ ಕೊಂಡೊಯ್ದರು. ಬಟ್ಲರ್ 80 ರನ್(49 ಎಸೆತ, 9 ಬೌಂಡರಿ, 3 ಸಿಕ್ಸರ್) ಅಲೆಕ್ಸ್ ಹೇಲ್ಸ್ 86 ರನ್(47 ಎಸೆತ, 4 ಬೌಂಡರಿ, 7 ಸಿಕ್ಸರ್) ಚಚ್ಚಿ ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯವನ್ನು ತಂದುಕೊಟ್ಟರು. ಇದನ್ನೂ ಓದಿ: ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ
Advertisement
Rohit Sharma crying in the dugout just broke my heart into a million pieces. He knows his innings was one of the deciding factors. pic.twitter.com/9QMLt5dlw3
— Aritra Mukherjee (@aritram029) November 10, 2022
ಭಾರತದ ಮೊದಲ 10 ಓವರ್‌ಗಳಲ್ಲಿ ಜಾಸ್ತಿ ರನ್ ಬಂದಿರಲಿಲ್ಲ. ಮೊದಲ ಪವರ್ ಪ್ಲೇ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತ್ತು. 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. 15 ಓವರ್‌ಗಳಲ್ಲಿ 100 ರನ್ ಬಂದಿದ್ದರೆ ಕೊನೆಯ 30 ಎಸೆತಗಳಲ್ಲಿ 68 ರನ್ ಬಂದಿತ್ತು.
ಇತ್ತ ಇಂಗ್ಲೆಂಡ್ ಮೊದಲ ಓವರಿನಿಂದಲೇ ದಂಡಿಸಲು ಆರಂಭಿಸಿತ್ತು ಮತ್ತು ಓವರ್ ಒಂದಕ್ಕೆ ಸರಾಸರಿ 10 ರನ್‌ಗಳು ಬರುತ್ತಿದ್ದವು. ಮೊದಲ ಪವರ್ ಪ್ಲೇನಲ್ಲಿ 63 ರನ್ ಬಂದರೆ 10.1 ಓವರ್‌ನಲ್ಲಿ 100 ರನ್ ಬಂದಿತ್ತು. ಕೇವಲ 83 ಎಸೆತಗಳಲ್ಲಿ 150 ರನ್ ದಾಖಲಾಗಿತ್ತು. ಅಂತಿಮವಾಗಿ 16 ಓವರ್‌ಗಳಲ್ಲಿ 170 ರನ್ ಹೊಡೆಯುವ ಮೂಲಕ ಇಂಗ್ಲೆಂಡ್ ಫೈನಲ್ ಪ್ರವೇಶಿಸಿತು.