ಮುಂಬೈ: ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದ, ಟೀಂ ಇಂಡಿಯಾದ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂದು ವರದಿಯಾಗಿದೆ.
Advertisement
ಫಿಟ್ನೆಸ್ ಪರೀಕ್ಷೆ ಪಾಸ್ ಆಗಿರುವ ಶರ್ಮಾ ಮುಂದಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಬಿಸಿಸಿಐ ಮೂಲಗಳಿಂದ ವರದಿ ಹೊರಬಿದ್ದಿದೆ. ವೆಸ್ಟ್ ಇಂಡೀಸ್ ಸರಣಿ ಬಗ್ಗೆ ಟ್ಟಿಟ್ಟರ್ನಲ್ಲಿ ಟ್ವೀಟ್ ಮಾಡಿರುವ ಬಿಸಿಸಿಐ, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಟಿ20 ಸರಣಿ ಪಂದ್ಯಗಳು ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್ ಮತ್ತು ಈಡನ್ ಗಾರ್ಡನ್ ಕೋಲ್ಕತ್ತಾದಲ್ಲಿ ನಡೆಯಲಿದೆ. 3 ಏಕದಿನ ಪಂದ್ಯಗಳ ಸರಣಿ ಫೆ.6 ರಂದು ಆರಂಭವಾಗಿ ಫೆ.11ಕ್ಕೆ ಮುಕ್ತಾಯಗೊಳ್ಳಲಿದೆ. 3 ಪಂದ್ಯಗಳ ಟಿ20 ಸರಣಿ ಫೆ.16ಕ್ಕೆ ಆರಂಭಗೊಂಡು ಫೆ.20 ಕೊನೆಗೊಳ್ಳಲಿದೆ. ಈಗಾಗಲೇ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಇದನ್ನೂ ಓದಿ: ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆಹಾಕಿದ ಪಾಂಡ್ಯ
Advertisement
NEWS ???? : BCCI announces revised venues for home series against West Indies.
The three ODIs will now be played at the Narendra Modi Stadium, Ahmedabad and three T20Is will be held at the Eden Gardens, Kolkata.
More details here – https://t.co/vH9SOhtpIS #INDvWI pic.twitter.com/KNEZ8swbVa
— BCCI (@BCCI) January 22, 2022
Advertisement
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಗಾಯಳುವಾಗಿ ಹೊರಗುಳಿದಿದ್ದರು. ಆ ಬಳಿಕ ಎನ್ಸಿಎನಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡು ಇದೀಗ ಮತ್ತೆ ತಂಡಕ್ಕೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್
Advertisement