ನವದೆಹಲಿ: ಟೀಂ ಇಂಡಿಯಾ (Team India) ನಾಯಕ ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ (Rohith Sharma) ವಿಶ್ವಕಪ್ ಕ್ರಿಕೆಟ್‌ನಲ್ಲಿ ಶತಕ, ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಅಫ್ಘಾನಿಸ್ತಾನ (Afghanistan) ವಿರುದ್ಧ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ (World Cup Cricket) 7 ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
Advertisement
Biggest six of the tournament so far! ???? pic.twitter.com/bds4FQFz3L
— Sky Sports Cricket (@SkyCricket) October 11, 2023
Advertisement
ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 6, ಶ್ರೀಲಂಕಾದ ಕುಮಾರ ಸಂಗಕ್ಕಾರ 5, ರಿಕ್ಕಿಪಾಂಟಿಂಗ್ 5, ಡೇವಿಡ್ ವಾರ್ನರ್ 4, ಸೌರವ್ ಗಂಗೂಲಿ 4 ಶತಕ ಸಿಡಿಸಿದ್ದರು. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?
Advertisement
ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 30 ಎಸೆತದಲ್ಲಿ 50 ರನ್ (7 ಬೌಂಡರಿ, 2 ಸಿಕ್ಸರ್) ಹೊಡೆದರೆ 63 ಎಸೆತದಲ್ಲಿ 100 ರನ್ (12 ಬೌಂಡರಿ, 4 ಸಿಕ್ಸರ್) ಚಚ್ಚಿದರು. ಅಂತಿಮವಾಗಿ ರೋಹಿತ್ ಶರ್ಮಾ ತಂಡದ ಮೊತ್ತ 205 ಆಗಿದ್ದಾಗ 131 ರನ್ (84 ಎಸೆತ, 16 ಬೌಂಡರಿ, 5 ಸಿಕ್ಸರ್) ಸಿಡಿಸಿ ರಶೀದ್ ಖಾನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಔಟಾದರು.
Advertisement
Does he want to break anymore records? ????
Rohit Sharma, stop it! ???????? pic.twitter.com/jRfmR9kTuo
— Sky Sports Cricket (@SkyCricket) October 11, 2023
ಅತಿವೇಗದ 1000 ರನ್
ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನೂ ರೋಹಿತ್ ಶರ್ಮಾ ಮಾಡಿದ್ದಾರೆ. ಡೇವಿಡ್ ವಾರ್ನರ್ ಜೊತೆಗೆ 19 ಇನಿಂಗ್ಸ್ಗಳಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.
63-ball century!
Rohit Sharma???? pic.twitter.com/eodaJGWx8x
— Sky Sports Cricket (@SkyCricket) October 11, 2023
ಭಾರತ ಪರ ಅತಿ ವೇಗದ ಶತಕ
63 ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಈ ಹಿಂದೆ ಕಪಿಲ್ ದೇವ್ 72 ಎಸೆತಗಳಲ್ಲಿ ಶತಕ ಹೊಡೆದಿದ್ದರು.
Fastest 100 in a CWC for India ⚡️???? pic.twitter.com/oS5GQnhK4u
— Sky Sports Cricket (@SkyCricket) October 11, 2023
ಅತಿ ಹೆಚ್ಚು ಸಿಕ್ಸರ್
ಎಲ್ಲಾ ಮಾದರಿ ಕ್ರಿಕೆಟ್ ಸೇರಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್ಗಳನ್ನು ಚಚ್ಚಿದ ಆಟಗಾರನಾಗಿ ರೋಹಿತ್ ಹೊರಹೊಮ್ಮಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ 553 ಸಿಕ್ಸರ್ (551 ಇನ್ನಿಂಗ್ಸ್) ಹೊಡೆದು ಮೊದಲ ಸ್ಥಾನದಲ್ಲಿದ್ದರು. ಈಗ ಮೂರನೇ ಸಿಕ್ಸರ್ ಬಾರಿಸುವ ಮೂಲಕ ಒಟ್ಟು 554 ಸಿಕ್ಸರ್ಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದ್ದಾರೆ.
Web Stories