ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ (World Cup) ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ಹೊರಹೊಮ್ಮಿದ್ದಾರೆ.
ಟೂರ್ನಿಯ ಲೀಗ್ ಹಂತದಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಬಲಗೈ ಬ್ಯಾಟರ್ 55.89 ಸರಾಸರಿಯಲ್ಲಿ 503 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದನ್ನೂ ಓದಿ: Six In Six – ಒಂದೇ ಓವರ್‌ನಲ್ಲಿ 6 ವಿಕೆಟ್ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್ ಕ್ರಿಕೆಟಿಗ
Advertisement
Advertisement
36 ವರ್ಷ ವಯಸ್ಸಿನ ರೋಹಿತ್ ಶರ್ಮಾ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ದಾಖಲೆ ಮಾಡಿದ್ದಾರೆ. ಆ ಮೂಲಕ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕನಾಗಿ ರೆಕಾರ್ಡ್ ಮಾಡಿದ್ದಾರೆ. ಗಂಗೂಲಿ ಭಾರತ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ 2003 ವಿಶ್ವಕಪ್‌ನಲ್ಲಿ 465 ರನ್ ಗಳಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು.
Advertisement
ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತದ ನಾಯಕರ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಂಗೂಲಿ ಇದ್ದಾರೆ. ಇವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ (2019 ರಲ್ಲಿ 443 ರನ್), ಮೊಹಮ್ಮದ್ ಅಜರುದ್ದೀನ್ (1992 ರಲ್ಲಿ 332 ರನ್) ಮತ್ತು ಕಪಿಲ್ ದೇವ್ (1983 ರಲ್ಲಿ 303 ರನ್) ಇದ್ದಾರೆ. ಇದನ್ನೂ ಓದಿ: World Cup 2023: ಭಾರತಕ್ಕೆ ಗೆಲುವಿನ ʻಶ್ರೇಯಸ್ಸುʼ – ಡಚ್ಚರ ವಿರುದ್ಧ 160 ರನ್‌ಗಳ ಭರ್ಜರಿ ಜಯ..!
Advertisement
ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ 54 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ರೋಹಿತ್ ಈ ಸಾಧನೆ ಮಾಡಿದ್ದಾರೆ. ಅವರು ನಾಕ್ ಸಮಯದಲ್ಲಿ ಒಟ್ಟು ಎರಡು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಬಾರಿಸಿದ್ದರು.