ಢಾಕಾ: ಟೀಂ ಇಂಡಿಯಾ (Team India) ವಿರುದ್ಧ ಬಾಂಗ್ಲಾದೇಶ (Bangladesh) ಐತಿಹಾಸಿಕ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಪಂದ್ಯ ಸೋತರು ಹೊಸ ದಾಖಲೆ ಬರೆಯುವ ಮೂಲಕ ತಾನು ಗೆದ್ದಿದ್ದಾರೆ.
Advertisement
ಕೈಬೆರಳಿನಿಂದ ರಕ್ತ ಸುರಿಯುತ್ತಿದ್ದರೂ ಡೆತ್ ಓವರ್‌ಗಳಲ್ಲಿ (DeathOver) ಹೋರಾಡಿದ ರೋಹಿತ್ ಶರ್ಮಾ ಟೀಂ ಇಂಡಿಯಾ ಗೆಲ್ಲಿಸಲು ಸತತವಾಗಿ ಪ್ರಯತ್ನಿಸಿದರು. 28 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿಯೊಂದಿಗೆ 51 ರನ್ ಗಳಿಸಿದರು. ಸ್ಫೋಟಕ ಸಿಕ್ಸರ್ ಬೌಂಡರಿಗಳ ಆಟದಲ್ಲಿ 182.14 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಹಿಟ್‌ಮ್ಯಾನ್ ಹೊಸ ದಾಖಲೆ ಸಹ ಬರೆದರು. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ
Advertisement
Advertisement
ಹೌದು.. ರೋಹಿತ್ ಶರ್ಮಾ ಈಗ ಟಾಪ್ ಸಿಕ್ಸರ್ ವೀರರ ಪಟ್ಟಿಯಲ್ಲಿದ್ದಾರೆ. 500 ಸಿಕ್ಸರ್ ಸಿಡಿಸಿದ ವಿಶ್ವದ 2ನೇ ಹಾಗೂ ಭಾರತದ ನಂ.1 ಆಟಗಾರರಾಗಿದ್ದಾರೆ. ಇದನ್ನೂ ಓದಿ: ಬೆರಳಲ್ಲಿ ರಕ್ತಸುರಿಯುತ್ತಿದ್ದರೂ ಕೊನೆವರೆಗೆ ಹೋರಾಡಿದ ಹಿಟ್‌ಮ್ಯಾನ್ – ರಾಹುಲ್ ಸಲಾಂ
Advertisement
483 ಪಂದ್ಯಗಳನ್ನಾಡಿರುವ ಕ್ರಿಸ್‌ಗೇಲ್ (Chris Gayle) 553 ಸಿಕ್ಸರ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, 428 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 502 ಸಿಕ್ಸರ್ ಚಚ್ಚಿ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೂ 525 ಪಂದ್ಯಗಳನ್ನಾಡಿರುವ ಪಾಕಿಸ್ತಾನದ (Pakistan) ಆಲ್‌ರೌಂಡರ್ ಶಾಹಿದ್ ಅಫ್ರಿದಿ 476 ಸಿಕ್ಸರ್, 432 ಪಂದ್ಯಗಳನ್ನಾಡಿರುವ ಕೀವಿಸ್ ಪಡೆಯ ಬ್ರಿಂಡನ್ ಮೆಕಲಂ 398 ಸಿಕ್ಸರ್, 367 ಪಂದ್ಯಗಳನ್ನಾಡಿರುವ ಮಾರ್ಟೀನ್ ಗಪ್ಟಿಲ್ 383 ಸಿಕ್ಸರ್ ಸಿಡಿಸಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಲ್ಲಿದ್ದಾರೆ.