ಹೈದರಾಬಾದ್: ಆಸ್ಟ್ರೇಲಿಯಾ (Australia) ವಿರುದ್ಧದ ಕೊನೆಯ ಟಿ20 (T20) ಪಂದ್ಯದಲ್ಲಿ ಭಾರತ (India) ಭರ್ಜರಿ ಜಯ ಸಾಧಿಸುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವಿನ ಸಂಭ್ರಮದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
ರೋಚಕವಾಗಿದ್ದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 21 ರನ್ ಬೇಕಾಗಿತ್ತು. 18 ಓವರ್‌ನ ಮೊದಲ ಎಸೆತವನ್ನು ಹಾರ್ದಿಕ್ ಪಾಂಡ್ಯ ಸಿಕ್ಸರ್‌ಗಟ್ಟಿದರು. ಮುಂದಿನ 5 ಎಸೆತಗಳಲ್ಲಿ ಕೊಹ್ಲಿ ಹಾಗೂ ಪಾಂಡ್ಯ 4 ರನ್ ಕಸಿದರು. ಕೊನೆಯ 6 ಎಸೆತಗಳಲ್ಲಿ ಭಾರತದ ಗೆಲುವಿಗೆ 11 ರನ್ ಬೇಕಾಗಿತ್ತು. ಡೇನಿಯಲ್ ಸ್ಯಾಮ್ ಎಸೆದ ಮೊದಲ ಎಸೆತವನ್ನು ಕೊಹ್ಲಿ ಸಿಕ್ಸರ್‌ಗಟ್ಟಿದರು. ಮರು ಎಸೆತದಲ್ಲೇ ಕೊಹ್ಲಿ ಔಟ್ ಆದರು. ನಂತರ ಕಾರ್ತಿಕ್ ಬಂದು 1 ರನ್ ಓಡಿದರು. 19ನೇ ಓವರ್‌ನ 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ ಭಾರತದ ಗೆಲುವಿಗೆ 4 ರನ್ ಬೇಕಾಗಿತ್ತು. 5ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ ಪಾಂಡ್ಯ ಭಾರತಕ್ಕೆ ಜಯ ತಂದುಕೊಟ್ಟರು. ಇದನ್ನೂ ಓದಿ: ಟಿ20ಯಲ್ಲಿ ಕೆಟ್ಟ ಸಾಧನೆ ಮಾಡಿದ ಬುಮ್ರಾ
Advertisement
The bond between these two is beyond perfection. Fans should understand this. #IndvsAus pic.twitter.com/qtklkMUsDQ
— Amit Mishra (@MishiAmit) September 25, 2022
Advertisement
ಇತ್ತ ಡಗೌಟ್‍ನಲ್ಲಿ ಜೊತೆಯಾಗಿ ಕುಳಿತಿದ್ದ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಂಭ್ರಮಿಸಲು ಪ್ರಾರಂಭಿಸಿದರು. ಕೊಹ್ಲಿ, ಕೂತಿದ್ದ ರೋಹಿತ್ ತೊಡೆಗೆ ತಟ್ಟಿ ಅಪ್ಪಿಕೊಂಡು ಸಂಭ್ರಮಿಸಿದ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದನ್ನೂ ಓದಿ: ಕೊಹ್ಲಿ ಜೊತೆ ಸೂರ್ಯನ ಅಬ್ಬರ – ವಿಶ್ವಚಾಂಪಿಯನ್ನರಿಗೆ ಸೋಲು, ಭಾರತಕ್ಕೆ T20 ಸರಣಿ
Advertisement
ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 187 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಚೇಸಿಂಗ್ ಕಿಂಗ್ ಕೊಹ್ಲಿ ಮತ್ತು ಸೂರ್ಯಕುಮಾರ್ ಸ್ಫೋಟಕ ಆಟ ನೆರವಾಯಿತು. ಅಂತಿಮ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದದಲ್ಲಿ ಫೋರ್ ಹೊಡೆದು ಪಾಂಡ್ಯ ಇನ್ನೊಂದು ಎಸೆತ ಬಾಕಿ ಇರುವಂತೆ 187 ರನ್ ಸಿಡಿಸಿ ಜಯ ತಂದು ಕೊಟ್ಟರು. ಅಂತಿಮವಾಗಿ 19.5 ಓವರ್‌ಗಳ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 187 ರನ್‍ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಭಾರತ ಈ ಗೆಲುವಿನೊಂದಿಗೆ ತವರಿನಲ್ಲಿ ಟಿ20 ಸರಣಿ ಗೆದ್ದುಕೊಂಡಿತು. ಜೊತೆಗೆ ಈ ವರ್ಷ ದಾಖಲೆಯ 21 ಟಿ20 ಪಂದ್ಯವನ್ನು ಗೆದ್ದು ನೂತನ ದಾಖಲೆ ಬರೆಯಿತು.