ಲೀಡ್ಸ್: ಮಾಜಿ ನಾಯಕ ಎಂಎಸ್ ಧೋನಿ ಹುಟ್ಟುಹಬ್ಬದ ಬಗ್ಗೆ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ ಫನ್ನಿ ಉತ್ತರ ನೀಡಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮಾ ಅವರಿಗೆ ಪತ್ರಕರ್ತರು, ನಾಳೆ ಧೋನಿ ಅವರ ಹುಟ್ಟುಹಬ್ಬವಿದೆ. ಏನು ಹೇಳುತ್ತೀರಿ ಎಂದು ಕೇಳಿದ್ದಾರೆ.
ಈ ಪ್ರಶ್ನೆಗೆ, ಈಗ ನಾನು ಏನು ಹೇಳಲಿ, ಹುಟ್ಟು ಹಬ್ಬಕ್ಕೆ ಏನು ಹೇಳುವುದು? ಹುಟ್ಟುಹಬ್ಬದ ಶುಭಾಶಯ ಬಿಟ್ಟರೆ ಬೇರೆ ಏನು ಹೇಳಬೇಕು. ಭಾನುವಾರ ದಿನ ಪೂರ್ತಿ ಬಸ್ಸಿನಲ್ಲಿ ಪ್ರಯಾಣಿಸುತ್ತೇವೆ. ಈ ಸಂದರ್ಭದಲ್ಲಿ ಧೋನಿಗಾಗಿ ನಾವು ಕೇಕ್ ಕತ್ತರಿಸುತ್ತೇವೆ. ಈ ವೇಳೆ ಕ್ಲಿಕ್ ಮಾಡಿದ ಫೋಟೋಗಳನ್ನು ನಿಮಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.
ಪ್ರಶ್ನೆಗೆ ಗಂಭೀರವಾಗಿ ಉತ್ತರಿಸದೇ ಹಾಸ್ಯದ ಉತ್ತರ ನೀಡಿದ ರೋಹಿತ್ ಶರ್ಮಾ ಅವರ ಈ ವಿಡಿಯೋವನ್ನು ಬಿಸಿಸಿಐ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದೆ. ಈ ವಿಡಿಯೋವನ್ನು 38 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
Is there anyone as candid and funny as @ImRo45? Here's what he had to say when asked about a message for Birthday Boy @msdhoni ???????? #TeamIndia #CWC19 #SLvIND pic.twitter.com/aCD23hgKts
— BCCI (@BCCI) July 6, 2019