ಲಂಡನ್: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಾಧನೆ ಮಾಡಿದ್ದು, ಆಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ 5 ಶತಕ ಸಿಡಿಸಿದ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ರೋಹಿತ್ ಶರ್ಮಾ ಅವರು ಚೇಸಿಂಗ್ ವೇಳೆಯೇ 3 ಶತಕಗಳನ್ನು ಗಳಿಸಿದ್ದು ವಿಶೇಷವಾಗಿದ್ದು, ಇದೇ ಸಂದರ್ಭದಲ್ಲಿ 600 ರನ್ ಸಿಡಿಸಿದ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೇ ವೃತ್ತಿ ಜೀವನದಲ್ಲಿ 27 ಏಕದಿನ ಶತಕ ಸಿಡಿಸಿದ್ದಾರೆ. ಅಲ್ಲದೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ 6 ಶತಕ ಸಿಡಿಸಿದ ರೋಹಿತ್ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 45 ಪಂದ್ಯಗಳಿಂದ ಸಚಿನ್ 6 ವಿಶ್ವಕಪ್‍ಗಳಲ್ಲಿ 6 ಶತಕ ಸಿಡಿಸಿದ್ದರೆ, 2 ವಿಶ್ವಕಪ್ ಆಡಿರುವ ರೋಹಿತ್ 16 ಪಂದ್ಯಗಳಿಂದ 06 ಶತಕ ಸಿಡಿಸಿದ್ದಾರೆ.
Advertisement
The Hitman just can't miss at the moment ????
Rohit Sharma brings up his fifth ???? at #CWC19 – no batsman has ever made as many at a single World Cup ????
What a player! pic.twitter.com/apwVq4WW6b
— ICC Cricket World Cup (@cricketworldcup) July 6, 2019
Advertisement
ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ರೋಹಿತ್ ಶರ್ಮಾ, ರಾಹುಲ್ ಜೋಡಿ 189 ರನ್ ಜೊತೆಯಾಟ ನೀಡಿದ್ದು, 2019ರ ವಿಶ್ವಕಪ್ ಕ್ರಿಕೆಟ್‍ನಲ್ಲಿ ಆಂಭಿಕರಾಗಿ 1 ಸಾವಿರ ಪ್ಲಸ್ ರನ್ ಸಿಡಿಸಿದ ಸಾಧನೆ ಮಾಡಿದರು. ಈ ಹಿಂದೆ 2007 ವಿಶ್ವಕಪ್ ನಲ್ಲಿ ಆಸೀಸ್ ಜೋಡಿ 1142 ರನ್ ಸಿಡಿಸಿದ್ದು, ಅಲ್ಲದೇ ಇಂದಿನ ಟೂರ್ನಿಯಲ್ಲೂ ಆಸೀಸ್ ಆರಂಭಿಕ ಜೋಡಿ 1 ಸಾವಿರ ಪ್ಲಸ್ ರನ್ ಗಳಿಸಿದೆ.
Advertisement
ರೋಹಿತ್ ಶರ್ಮಾ ಈ ಟೂರ್ನಿಯಲ್ಲಿ ಒಟ್ಟು 647 ರನ್ ಹೊಡೆದಿದ್ದಾರೆ. 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ 673 ರನ್ ಸಿಡಿಸಿದ್ದರು. ಸದ್ಯ ಸಚಿನ್ ಹೊರತು ಪಡಿಸಿ ರೋಹಿತ್ 600 ಪ್ಲಸ್ ಸಿಡಿಸಿದ ಭಾರತದ ಆಟಗಾರ ಸಾಧನೆ ಮಾಡಿದ್ದಾರೆ. ಮ್ಯಾಥ್ಯೂ ಹೇಡನ್ 659 ರನ್, ಶಕಿಬ್ ಅಲ್ ಹಸನ್ 606 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Advertisement
Rohit Sharma is once again the leading runscorer at #CWC19 ????
What a tournament he's having ???? #TeamIndia pic.twitter.com/gamASBBdb2
— ICC (@ICC) July 6, 2019
ಯಾವ ತಂಡದ ವಿರುದ್ಧ ಎಷ್ಟು ರನ್?
122* – ದಕ್ಷಿಣ ಆಫ್ರಿಕಾ
57 – ಆಸ್ಟ್ರೇಲಿಯಾ
140 – ಪಾಕಿಸ್ತಾನ
1 – ಅಫ್ಘಾನಿಸ್ತಾನ
18 – ವೆಸ್ಟ್ ಇಂಡೀಸ್
102 – ಇಂಗ್ಲೆಂಡ್
104 – ಬಾಂಗ್ಲಾದೇಶ
103 – ಶ್ರೀಲಂಕಾ
Rohit Sharma, you beauty ????????
Brings up his 5th #CWC19 ????. Third century in a row. Also becomes the only batsman to score 5 centuries in a World Cup.
There is no stopping this fella ???????????? pic.twitter.com/cVzGfZ5df1
— BCCI (@BCCI) July 6, 2019