ಬೆಂಗಳೂರು: ರಾಜ್ಯದ ಉನ್ನತ ಮಹಿಳಾ ಅಧಿಕಾರಿಗಳ ಕಚ್ಚಾಟ ಇದೀಗ ಕೋರ್ಟ್ (Court) ವರೆಗೆ ತಲುಪಿದೆ. ಐಪಿಎಸ್ (IPS) ಅಧಿಕಾರಿ ಡಿ ರೂಪಾ (D Roopa) ವಿರುದ್ಧ ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕೋರ್ಟ್ ಮೆಟ್ಟಿಲೇರಿದ್ದಾರೆ.
ರೋಹಿಣಿ ಮಾಧ್ಯಮಗಳು ಹಾಗೂ ರೂಪಾ ವಿರುದ್ಧ ನಿರ್ಬಂಧಕಾಜ್ಞೆ ಅರ್ಜಿ ಸಲ್ಲಿಸಿದ್ದಾರೆ. ರೂಪಾ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಿಎಸ್‌ಗೆ ದೂರು ನೀಡಿದರೂ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರು ತಮ್ಮ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಬೇಕು ಎಂದು ರೋಹಿಣಿ ವಾದ ಮಂಡಿಸಿದ್ದಾರೆ.
ಈಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳಕ್ಕೆ ಸರ್ಕಾರ ಅಂತ್ಯ ಹಾಡಿದೆ. ರೋಹಿಣಿ ಸಿಂಧೂರಿ, ರೂಪಾ, ಹಾಗೂ ರೂಪಾ ಪತಿ ಮುನೀಷ್ ಮೌದ್ಗಿಲ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದರ ಬೆನ್ನಲ್ಲೇ ಆರ್‌ಟಿಐ ಕಾರ್ಯಕರ್ತ ಗಂಗರಾಜು ಜೊತೆಗೆ ರೂಪಾ ಮಾತನಾಡಿರುವ ಆಡಿಯೋವೊಂದು ಲೀಕ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.
ಜನವರಿ 30ರಂದು ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ರನ್ನು ಆರ್‌ಟಿಐ ಕಾರ್ಯಕರ್ತ ಗಂಗರಾಜು ಭೇಟಿ ಮಾಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಅಧಿಕಾರಿ ರೂಪಾ, ಗಂಗರಾಜುಗೆ ಕರೆ ಮಾಡಿ ಹೀನಾಮಾನವಾಗಿ ಬೈಯ್ದಿದ್ದಾರೆ. ಗಂಗರಾಜು, ರೋಹಿಣಿ ಸಿಂಧೂರಿ ಪರವಾಗಿ ಮೌದ್ಗಿಲ್‌ರನ್ನು ಭೇಟಿ ಮಾಡಲು ಬಂದಿದ್ದಾರೆ ಎಂದು ಕೆಟ್ಟ ಭಾಷೆಗಳಲ್ಲಿ ನಿಂದಿಸಿದ್ದಾರೆ. ರೋಹಿಣಿ ಸಿಂಧೂರಿ ಬಗ್ಗೆಯೂ ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ.
ಮತ್ತೊಂದು ಆಡಿಯೋದಲ್ಲಿ ಕಂದಾಯ ಇಲಾಖೆಯಲ್ಲೇ ಮೌದ್ಗಿಲ್ ಇದ್ದರೆ ಆಕೆ ಪದೇ ಪದೇ ಬಂದು ಇವರ ಸಹಾಯ ಪಡೆಯುತ್ತಾರೆ ಎಂದು ಹೇಳುವ ಮೂಲಕ ರೋಹಿಣಿ ಸಿಂಧೂರಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರಾ ಎಂಬ ಅನುಮಾನ ದಟ್ಟವಾಗುವಂತೆ ಮಾಡಿದ್ದಾರೆ. ಜೊತೆಗೆ ರೋಹಿಣಿ ಕುರಿತು ಹಲವು ವಿಚಾರ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಆಸ್ತಿ ಆರೋಪ- IAS ಅಧಿಕಾರಿ ಆಸ್ತಿಯ Exclusive ಡೀಟೆಲ್ಸ್ ಇಲ್ಲಿದೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗಂಗರಾಜು, ತಾವು ರೋಹಿಣಿ ಸಿಂಧೂರಿ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭೂ ಅಕ್ರಮದ ದೂರು ನೀಡಲು ಮೌದ್ಗಿಲ್ ಕಚೇರಿಗೆ ಹೋಗಿದ್ದೆ. ಇಷ್ಟಕ್ಕೆ ನನಗೆ ರೂಪಾ ನಿಂದಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದಿದ್ದಾರೆ. ಈ ವಿಚಾರ ಪರಿಷತ್‌ನಲ್ಲಿಯೂ ಸದ್ದು ಮಾಡಿದೆ.
ಈ ನಡುವೆಯೇ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಧ್ಯಮಗಳು ಹಾಗೂ ರೂಪಾ ವಿರುದ್ಧ ನಿರ್ಬಂಧಕಾಜ್ಞೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದೆ. ಇದನ್ನೂ ಓದಿ: ರೋಹಿಣಿ, ರೂಪಾರನ್ನು ಅಮಾನತು ಮಾಡಿ ತನಿಖೆ ನಡೆಸಿ: ಹೆಚ್.ವಿಶ್ವನಾಥ್ ಆಗ್ರಹ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k