ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ (D Roopa) ವಿರುದ್ಧ ಐಎಎಸ್ ಅಧಿಕಾರ ರೋಹಿಣಿ ಸಿಂಧೂರಿ (Rohini Sindhuri) ಒಂದರ ಮೇಲೊಂದು ಕಾನೂನು ಸಮರ ಮಾಡುತ್ತಿದ್ದಾರೆ. ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲು ಮಾಡಿರುವ ರೋಹಿಣಿ ಈಗ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
ಈಗಾಗಲೇ ಸಿಟಿ ಸಿವಿಲ್ ಕೋರ್ಟ್ ರೋಹಿಣಿ ಸಿಂಧೂರಿ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು, ತಮ್ಮ ಫೇಸ್‌ಬುಕ್ ಅಲ್ಲಿಯೂ ಯಾವುದೇ ಪೋಸ್ಟ್ ಹಾಕಬಾರದು ಎಂದು ಐಪಿಎಸ್ ರೂಪಾ ಅವರಿಗೆ ಆದೇಶ ನೀಡಿತ್ತು. ಆದರೆ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಪೋಸ್ಟ್‌ಗಳನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ರೋಹಿಣಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಮಧ್ಯಂತರ ರಿಲೀಫ್ – ಷರತ್ತು ಏನು?
ಬುಧವಾರ ರೋಹಿಣಿ ಸಿಂಧೂರಿ ಅರ್ಜಿ ಸಲ್ಲಿಸಿದ್ದು, ಗುರುವಾರ ಈ ಬಗ್ಗೆ ವಿಚಾರಣೆ ನಡೆಯಲಿದೆ. ರೂಪಾ ವಿರುದ್ಧ ಸಿಂಧೂರಿ ಮತ್ತೊಂದು ಕಾನೂನು ಹೋರಾಟ ಮಾಡುತ್ತಿದ್ದು, ಇದು ಎಲ್ಲಿವರೆಗೆ ಹೋಗಿ ತಲುಪಲಿದೆಯೋ ನೋಡಬೇಕಿದೆ. ಇದನ್ನೂ ಓದಿ: ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ