ನವದೆಹಲಿ: ರೋಹಿಂಗ್ಯಾ ನಿರಾಶ್ರಿತರ ವಿಷಯದಲ್ಲಿ ಕೇಂದ್ರ ಸರ್ಕಾರ ಯೂಟರ್ನ್ ಹೊಡೆದಿದೆ. ದೆಹಲಿಯ ಬಕ್ಕರ್‌ವಾಲಾ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್ ನೀಡಲು ಮುಂದಾಗಿದೆ.
ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 1,100 ರೋಹಿಂಗ್ಯಾ ಮುಸ್ಲಿಮರು ಟೆಂಟ್‌ನಲ್ಲಿ ವಾಸಿಸುತ್ತಿದ್ದು ಅವರನ್ನು ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಈ ಅಪಾರ್ಟ್‌ಮೆಂಟ್‌ಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ.
Advertisement
ದೇಶದ ನಿರಾಶ್ರಿತರ ಯೋಜನೆಯನ್ನು ಸಿಎಎಗೆ ಜೋಡಿಸಿ ಸುಳ್ಳು ಹಬ್ಬಿಸಿದವರಿಗೆ ಇದು ಕಹಿ ಸುದ್ದಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ಧಾರೆ.
Advertisement
Those who made a career out of spreading canards on India’s refugee policy deliberately linking it to #CAA will be disappointed.
India respects & follows @UN Refugee Convention 1951 & provides refuge to all, regardless of their race, religion or creed.@MIB_India @NBirenSingh pic.twitter.com/6jyMl9dJ7Q
— Hardeep Singh Puri (@HardeepSPuri) August 17, 2022
Advertisement
ಈ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾ ಪ್ರದೇಶದ EWS ಫ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, ರಾತ್ರಿಯಿಡೀ ದೆಹಲಿ ಪೊಲೀಸರಿಂದ ಭದ್ರತೆ ನೀಡಲಾಗುತ್ತದೆ ಎಂದಿದ್ದಾರೆ.
Advertisement
ಉದ್ದೇಶಪೂರ್ವಕವಾಗಿ ಸಿಎಎ ಮತ್ತು ನಿರಾಶ್ರಿತರ ಯೋಜನೆಯನ್ನು ಜೋಡಿಸಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ. ಭಾರತ 1951 ರ ನಿರಾಶ್ರಿತರ ಸಮಾವೇಶವನ್ನು ಗೌರವಿಸುತ್ತದೆ. ಜನಾಂಗ, ಧರ್ಮ ಅಥವಾ ಧರ್ಮವನ್ನು ಲೆಕ್ಕಿಸದೇ ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಮ್ಯಾನ್ಮಾರ್‌ನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಭಾರತಲ್ಲಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ. ಈ ನಿರಾಶ್ರಿತರು ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.
ಪಾಕ್ ಸೇರಿದಂತೆ ಉಗ್ರ ಸಂಘಟನೆ ಜೊತೆ ಈ ಮುಸ್ಲಿಮರು ಸಂಬಂಧ ಹೊಂದಿದ್ದಾರೆ. ದೇಶದಲ್ಲಿ ಕೋಮುವಾದ ಹರಡುತ್ತಿದ್ದಾರೆ. ಭಾರತದಲ್ಲಿ ನಕಲಿ ಗುರುತಿನ ಪತ್ರ ಪಡೆದು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಹೇಳಿತ್ತು.