– ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬೆನ್ನಲ್ಲೇ ಕ್ರೀಡಾಪಟುವಿನ ಮತ್ತೊಂದು ಸಾಧನೆ
ಕ್ಯಾನ್ಬೆರಾ: ವಿಶ್ವ ಟೆನಿಸ್‌ನ ನಂ.1 ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ (Australian Open 2024) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Advertisement
ರೋಹನ್ ಬೋಪಣ್ಣ (RohanBopanna) ಮತ್ತು ಮ್ಯಾಥ್ಯೂ ಎಬ್ಡೆನ್ (Matthew Ebden) ಜೋಡಿಯು ಶನಿವಾರ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ ಜೋಡಿಯನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಚಾಂಪಿಯನ್ ಆಗಿದ್ದಾರೆ. ಆ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದನ್ನೂ ಓದಿ: IND vs ENG, 1st Test: ಎರಡನೇ ದಿನದಾಟದಲ್ಲಿ ಭಾರತಕ್ಕೆ 175 ರನ್ ಮುನ್ನಡೆ
Advertisement
Advertisement
1 ಗಂಟೆ 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಟಲಿ ಜೋಡಿಯು ವಿರುದ್ಧ ಭಾರತ ಮತ್ತು ಆಸ್ಟ್ರೇಲಿಯಾ ಜೋಡಿಯು 7-6 (0), 7-5 ಅಂತರದಲ್ಲಿ ಜಯ ಸಾಧಿಸಿತು. ಬೋಪಣ್ಣ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
That Grand Slam feeling ????#AusOpen pic.twitter.com/Azz5KoUdML
— #AusOpen (@AustralianOpen) January 27, 2024
ಫೈನಲ್ ತಲುಪಲು ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಎಬ್ಡೆನ್, ಚೀನಾದ ಜಾಂಗ್ ಝಿಜೆನ್ ಮತ್ತು ಜೆಕ್ ಗಣರಾಜ್ಯದ ತೋಮಸ್ ಮಚಾಕ್ ಜೋಡಿಯನ್ನು ಕೇವಲ ಎರಡು ಗಂಟೆಗಳಲ್ಲಿ 6-3, 3-6, 7-6 ಅಂತರದಲ್ಲಿ ಮಣಿಸಿದ್ದರು. ಇದನ್ನೂ ಓದಿ: ಇಂದಿನಿಂದ ಮೂರು ದಿನ ಬೆಂಗ್ಳೂರಲ್ಲಿ ಬಾಲಕರಿಗೆ IPL ಮಾದರಿ ಕ್ರಿಕೆಟ್
43 ವಯಸ್ಸಿನ ಬೋಪಣ್ಣ ಪುರುಷರ ಟೆನಿಸ್‌ನಲ್ಲಿ ಹಿರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಆದರು. ಅವರು ಜೀನ್-ಜೂಲಿಯನ್ ರೋಜರ್ ಅವರ ದಾಖಲೆ ಮುರಿದಿದ್ದಾರೆ. ರೋಜರ್ ತಮ್ಮ 40 ನೇ ವಯಸ್ಸಿನಲ್ಲಿ 2022 ರಲ್ಲಿ ಮಾರ್ಸೆಲೊ ಅರೆವೊಲಾ ಅವರೊಂದಿಗೆ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಟ್ರೋಫಿ ಗೆದ್ದಿದ್ದರು.