ಬರ್ನ್: 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಟೆನ್ನಿಸ್ ಲೆಜೆಂಡ್ ರೋಜರ್ ಫೆಡರರ್(Roger Federer) ತಮ್ಮ ವೃತ್ತಿ ಜೀವನಕ್ಕೆ ವಿದಾಯವನ್ನು ಹೇಳಿದ್ದಾರೆ.
ವಿಶ್ವ ಕಂಡ ಶ್ರೇಷ್ಠ ಟೆನ್ನಿಸ್(Tennis) ಆಟಗಾರರಲ್ಲಿ ಒಬ್ಬರಾದ ಸ್ವಿಜರ್‌ಲ್ಯಾಂಡ್‍ನ ಫೆಡರರ್ ಈ ಬಗ್ಗೆ ಟ್ವೀಟ್ ಮಾಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಂದಿನ ವಾರ ಆರಂಭವಾಗುವ ಲಾವರ್ ಕಪ್ 2022 ನನ್ನ ಕೊನೆಯ ಪಂದ್ಯ ಎಂದು ಹೇಳಿದ್ದಾರೆ.ಆ ಮೂಲಕ ಜಗತ್ತು ಕಂಡ ಶ್ರೇಷ್ಠ ಆಟಗಾರ ಫೆಡರರ್ 24 ವರ್ಷಗಳ ವೃತ್ತಿ ಜೀವನವನ್ನು ಅಂತ್ಯಗೊಳಿಸಲಿದ್ದಾರೆ.
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿದ್ದು, ನನ್ನ ಟೆನ್ನಿಸ್ ಕುಟುಂಬಕ್ಕೆ, ನನ್ನ ಪ್ರತಿಸ್ಪರ್ಧಿಗಳು, ಅಭಿಮಾನಿಗಳೊಂದಿಗೆ ಕೆಲವು ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ 3 ವರ್ಷಳಿಂದ ನನಗಾಗಿದ್ದ ಗಾಯಗಳು ಹಾಗೂ ಶಸ್ತ್ರ ಚಿಕಿತ್ಸೆಗಳು ಅನೇಕ ಸವಾಲನ್ನು ನೀಡಿತ್ತು. ಆದರೂ ನಾನು ಸಂಪೂರ್ಣವಾಗಿ ಸ್ಪರ್ಧಾತ್ಮಕವಾಗಿ ಮತ್ತೆ ಟೆನ್ನಿಸ್ ಅಂಗಳಕ್ಕೆ ಮರಳಲು ಶ್ರಮಿಸಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.
Advertisement
— Roger Federer (@rogerfederer) September 15, 2022
Advertisement
ಫೆಡರರ್ 2003ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದರು. ಅದಾದ ಬಳಿಕ 8 ವಿಂಬಲ್ಡನ್, 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್ ಮತ್ತು 5 ಯುಎಸ್ ಓಪನ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಸೋಲಿನೊಂದಿಗೆ ಟೆನಿಸ್‍ಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್
ಒಟ್ಟು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದವರ ಪೈಕಿ ಫೆಡರರ್ 3ನೇ ಸ್ಥಾನವನ್ನು ಪಡೆದಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಇದ್ದಾರೆ. ಇದನ್ನೂ ಓದಿ: ಬಿಕೆ ಹರಿಪ್ರಸಾದ್ ಕ್ರಿಶ್ಚಿಯನ್ ಆದ್ರೆ ನಮ್ಮದೇನೂ ತಕಾರರಿಲ್ಲ: ಮಾಧುಸ್ವಾಮಿ