ಸತತ ಮಳೆಯಿಂದಾಗಿ ಮುಂಬೈ ಸೇರಿದಂತೆ ಹಲವು ನಗರಗಳು ಕಸದಿಂದ ತುಂಬಿ ಹೋಗಿವೆ. ಕಸ ತಗೆಯುವುದಕ್ಕೆ ಆಗದೇ ಇರುವಷ್ಟು ಮಳೆ ಆವಾಂತರ ಸೃಷ್ಟಿ ಮಾಡಿದೆ. ಈಗೀಗ ಮಳೆ ನಿಂತರೂ ಕಸದ ಸಮಸ್ಯೆ ಮಾತ್ರ ನಿಂತಿಲ್ಲ. ಹಾಗಾಗಿ ಮುಂಬೈ ನಗರದಲ್ಲಿ ಅಲ್ಲಲ್ಲಿ ಬೀದಿಯಲ್ಲಿ ಕಸದ ರಾಶಿಯೇ ಬಿದ್ದಿವೆ. ಇದನ್ನು ಗಮನಿಸಿದ ವಿವಾದಿತ ನಟಿ ರಾಕಿ ಸಾವಂತ್, ತಾವೇ ಸಲಕಿ ಹಿಡಿದು ಕಸ ತಗೆಯಲು ಮುಂದಾಗಿದ್ದಾರೆ.
ದಿನವೂ ಜಿಮ್ ಗೆ ಹೋಗುವ ರಾಕಿ ಸಾವಂತ್, ತಾವು ಜಿಮ್ ಗೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹಲವು ದಿನಗಳಿಂದ ನೋಡಿದ್ದಾರೆ. ಮುಂಬೈನ ಬಿಎಂಸಿ ಸಿಬ್ಬಂದಿಗಳು ಯಾವಾಗ ಇದನ್ನು ಸರಿ ಮಾಡುತ್ತಾರೆ ಎಂದು ಕಾದಿದ್ದಾರೆ. ಎರಡ್ಮೂರು ದಿನಗಳ ನಂತರವೂ ಆ ಕಸ ಹಾಗೆಯೇ ಇದ್ದ ಕಾರಣಕ್ಕಾಗಿ ತಾವೇ ಸಲಕಿ ತಗೆದುಕೊಂಡು ಅದನ್ನು ತಗೆಯಲು ಮುಂದಾಗಿದ್ದಾರೆ. ಒಂದಷ್ಟು ಕಸವನ್ನೂ ಅವರು ಸ್ವಚ್ಚಗೊಳಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:ಆಗಸ್ಟ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಸಿನಿಮಾ ಟೈಟಲ್ ಲಾಂಚ್ : ಶಿವರಾಜ್ ಕುಮಾರ್ ಹೀರೋ
ರಸ್ತೆಯನ್ನು ಸ್ವಚ್ಚ ಮಾಡುವುದರ ಜೊತೆಗೆ ಬಿಎಂಸಿ ಸಿಬ್ಬಂದಿ ಮತ್ತು ಕಮಿಷ್ನರ್ ಅವರನ್ನು ತರಾಟೆಗೆ ತಗೆದುಕೊಂಡಿರುವ ರಾಕಿ, ಅವರೆಲ್ಲರೂ ಗಡದ್ದಾಗಿ ನಿದ್ದೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಸದಾ ವಿವಾದವನ್ನೇ ಮಾಡಿಕೊಂಡು ಓಡಾಡುತ್ತಿದ್ದ ರಾಕಿಯ ಈ ನಡೆ ಕಂಡು ಬಹುತೇಕರು ಹೊಗಳಿದ್ದಾರೆ. ಇಂತಹ ಕೆಲಸಗಳ ಮೂಲಕ ಒಳ್ಳೆಯವರಾಗಿ ಎಂದು ಹಾರೈಸಿದ್ದಾರೆ. ರಾಕಿಯ ಈ ವಿಡಿಯೋವಂತೂ ಮುಂಬೈ ರಸ್ತೆಗಳ ದಾರುಣ ಸ್ಥಿತಿಯನ್ನು ಕಟ್ಟಿಕೊಡುತ್ತಿದೆ.