ಮತ್ತೆ ಟಾಕ್ಸಿಕ್ ಅಖಾಡಕ್ಕೆ ರಾಕಿಭಾಯ್

Public TV
1 Min Read
Toxic movie

ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಮೋಸ್ಟ್ ಅವೇಟೆಡ್ ಸಿನಿಮಾ ಟಾಕ್ಸಿಕ್ ಮುಂಬೈನಲ್ಲಿ ಅದ್ಧೂರಿಯಾಗಿ ಶೂಟಿಂಗ್ ಪ್ಲ್ಯಾನ್‌ ಮಾಡಿಕೊಂಡಿದೆ. ಅಮೆರಿಕಾ ಪ್ರವಾಸಕ್ಕೆ ತೆರಳಿದ್ದ ರಾಕಿಭಾಯ್ ವಾಪಸ್ಸಾಗಿದ್ದಾರೆ. ಅಲ್ಲದೇ ಟಾಕ್ಸಿಕ್ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರಂತೆ. ಈ ಹಂತದ ಚಿತ್ರೀಕರಣ ಗೋರ್‌ಗಾಂವ್‌ನ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆಯಂತೆ.

Toxic teaser yash

ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲು ಟಾಕ್ಸಿಕ್ ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆಯಂತೆ. ಹೀಗಾಗಿ ಹಾಲಿವುಡ್‌ನ ಖ್ಯಾತ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಮತ್ತು ಜಾರ್ಜಿ ಇರಾಜುಲಿ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸಮರ ಕಲೆಗಳಾದ ಕ್ರಾವ್ ಮಗಾ ಮತ್ತು ಫಿಲಿಪಿನೋ ಕಲಿ ತಂತ್ರಗಳನ್ನು ಮಿಕ್ಸ್ ಮಾಡಿ ಸಾಹಸ ಸನ್ನಿವೇಶ ಕಂಪೋಸ್ ಮಾಡಲಾಗಿದೆಯಂತೆ. ಟಾಕ್ಸಿಕ್ ಸಿನಿಮಾ ಹಲವು ಸಾಹಸ ಕಲೆಗಳ ಮಿಶ್ರಣ ಹೊಂದಿದೆ ಎಂದು ಹೇಳಲಾಗುತ್ತಿದೆ.

toxic movie

ರಾಕಿಂಗ್‌ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷಗಳಿವೆ. ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಕಾನ್ಸೆಪ್ಟ್‌ನಲ್ಲಿ ತಯಾರಾಗ್ತಿರುವ ಸಿನಿಮಾ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಕೆಜಿಎಫ್ ಸಿನಿಮಾ ತೆರೆಗೆ ಬಂದು ಮೂರು ವರ್ಷಗಳಾಗಿವೆ, ಯಶ್ ಸಿನಿಮಾ ಸಹಜವಾಗಿಯೇ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.

ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಇನ್ನು ರಾಕಿಂಗ್‌ಸ್ಟಾರ್ ಮಾನ್‌ಸ್ಟಾರ್ ಮೈಂಡ್ ಕ್ರಿಯೆಷನ್ಸ್ ಬ್ಯಾನರ್‌ನಲ್ಲಿ ಸಹ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಟೀಸರ್ ಹಾಗೂ ಗ್ಲಿಂಪ್ಲ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಯಶ್ ತಮ್ಮ ಅಭಿಮಾನಿ ಬಳಗಕ್ಕೆ ಯಾವ ಸರ್ಪ್ರೈಸ್‌ ಎಲಿಮೆಂಟ್ ಕೊಡಲಿದ್ದಾರೆ ಅಂತಾ ಕಾದು ನೋಡಬೇಕಿದೆ.

Share This Article