ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

Public TV
1 Min Read
YASH 3

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ರೊಮ್ಯಾಂಟಿಕ್ ಹಾಡುಗಳೊಂದಿಗೆ ಬಹುನಿರೀಕ್ಷಿತ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ತಡವಾದಷ್ಟೂ ಕಾತರವನ್ನು ಹೆಚ್ಚಾಗಿಸುತ್ತಿರೋ ಈ ಸಿನಿಮಾ ಇದೀಗ ಬಿಡುಗಡೆಯ ನಿರ್ಣಾಯಕ ಹಂತ ತಲುಪಿಕೊಂಡಿದೆ. ಅದರ ಭಾಗವಾಗಿ ಚೆಂದದ್ದೊಂದು ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ರೆಡಿಯಾಗಿದೆ. ಈ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಪ್ರೀತಿಯಿಂದ ಬಿಡುಗಡೆ ಮಾಡಲಿದ್ದಾರೆ.

Kiss New F copy

ಇದೇ ಶುಕ್ರವಾರ, 23ನೇ ತಾರೀಕಿನಂದು ರಾಕಿಂಗ್ ಸ್ಟಾರ್ ಯಶ್ ಕಿಸ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಯಶ್ ಬಹು ಕಾಲದ ಸ್ನೇಹಿತರು. ಈ ಸೆಳೆತದಿಂದಲೇ ತಮ್ಮ ಬ್ಯುಸಿಯಾದ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಕಿಸ್ ಟ್ರೇಲರ್ ಲಾಂಚ್ ಮಾಡಲು ಅವರೊಪ್ಪಿಕೊಂಡಿದ್ದಾರೆ. ಈ ಮೂಲಕವೇ ಕಿಸ್ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತೆಯೂ ಆಗಿದೆ. ಕಿಸ್ ಈವರೆಗೂ ಸೃಷ್ಟಿಸಿರೋ ಕ್ರೇಜ್ ಕಂಡು ಯಶ್ ಸಂತಸಗೊಂಡಿದ್ದಾರಂತೆ.

kiss 6

ವಿರಾಟ್ ಮತ್ತು ಶ್ರೀಲೀಲಾ ಕಿಸ್‍ನಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿರೋ ಶೀಲ ಸುಶೀಲ ಯೂ ಡೋಂಟುವರಿ ಎಂಬ ಹಾಡಂತೂ ಈ ಕ್ಷಣಕ್ಕೂ ಟ್ರೆಂಡಿಂಗ್‍ನಲ್ಲಿದೆ. ಆ ನಂತರ ಬಂದಿರೋ ಹಾಡುಗಳೂ ಕೂಡಾ ಮಿಲಿಯನ್ನುಗಟ್ಟಲೆ ವೀವ್ಸ್‍ನೊಂದಿಗೆ ದಾಖಲೆ ಬರೆದಿವೆ. ಆದರೆ ಈ ಸಿನಿಮಾದ ಕಥೆ ಏನಿರಬಹುದೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದು ಕೊಂಡಿದೆ. ಶುಕ್ರವಾರ ಯಶ್ ಬಿಡುಗಡೆಗೊಳಿಸಲಿರೋ ಟ್ರೇಲರ್‍ನಲ್ಲಿ ಅದರ ಸಿಳಿವಿರಬಹುದಾ? ಅಥವಾ ಆ ಮೂಲಕವೇ ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗುವಂತೆ ಈ ಟ್ರೇಲರ್ ಅನ್ನು ರೂಪಿಸಿದ್ದಾರಾ ಅನ್ನೋದೆಲ್ಲ ಜಾಹೀರಾಗಲು ಇನ್ನೊಂದು ದಿನ ಕಾಯಬೇಕಿದೆಯಷ್ಟೆ!

kiss

Share This Article
Leave a Comment

Leave a Reply

Your email address will not be published. Required fields are marked *