Connect with us

Bengaluru City

ತಮಿಳಿನ ರ‍್ಯಾಪ್‌ ಸಾಂಗ್‍ನಲ್ಲೂ ರಾಕಿಭಾಯ್ ಹವಾ

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಎಷ್ಟರ ಮಟ್ಟಿಗೆ ಇದೆ ಅಂದರೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಅಭಿಮಾನಿಗಳ ಮನ ಗೆದ್ದಿದೆ. ಅಷ್ಟೇ ಅಲ್ಲದೆ ಕೆಜಿಎಫ್-2 ಚಿತ್ರದ ಮೇಲೂ ಬಹಳಷ್ಟು ನಿರೀಕ್ಷೆ ಇದ್ದು, ಅಭಿಮಾನಿಗಳು ತೆರೆಮೇಲೆ ರಾಕಿಭಾಯ್ ಹವಾ ಹೇಗಿರುತ್ತೆ ಅಂತ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಅಭಿಗಳಿಬ್ಬರು ರಾಕಿಬಾಯ್‍ಗಾಗಿ ಸ್ಪೆಷಲ್ ರ‍್ಯಾಪ್‌ ಸಾಂಗ್ ಒಂದನ್ನು ಮಾಡಿದ್ದಾರೆ. ಅದು ತಮಿಳಿನಲ್ಲಿ ಈ ರ‍್ಯಾಪ್‌ ಸಾಂಗ್ ಮಾಡಲಾಗಿದ್ದು, ಕನ್ನಡ ಮಾತ್ರವಲ್ಲ ಬೇರೆ ಭಾಷೆಯಲ್ಲೂ ಯಶ್ ಹವಾ ಹೇಗಿದೆ ಎನ್ನೊದಕ್ಕೆ ಒಂದು ಸಾಕ್ಷಿಯಾಗಿದೆ.

ಸದ್ಯ ಕೆಜಿಎಫ್-2 ಗಾಗಿ ಎಲ್ಲರು ಕಾತರದಿಂದ ಎದುರು ನೋಡುತ್ತಿದ್ದಾರೆ. ರಾಕಿ ಭಾಯ್ ಎಂಟ್ರಿಗಾಗಿ ಇಡೀ ಭಾರತೀಯ ಚಿತ್ರಾಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಯಶ್ ತಮಿಳು ಅಭಿಮಾನಿಗಳಾದ ಹಸ್ಲರ್ ಭಾಯ್ ಹಾಗೂ ಹೈಡ್ ಕಾರ್ಟಿ ಎಂಬವರು ತಮ್ಮ ನೆಚ್ಚಿನ ರಾಕಿ ಭಾಯ್‍ಗಾಗಿ ಸ್ಪೆಷಲ್ ರ‍್ಯಾಪ್‌ ಸಾಂಗ್ ಹಾಡಿ ಬಿಡುಗಡೆಗೊಳಿಸಿದ್ದಾರೆ.

ಕೆಜಿಎಫ್ ಚಿತ್ರದ ಅದ್ಭುತ ಬ್ಯಾಗ್ರೌಂಡ್ ಹೇಗಿದೆಯೋ ಅದೇ ರೀತಿ ರ‍್ಯಾಪ್‌ ಸಾಂಗ್ ಶೂಟ್ ಮಾಡಿರುವುದು ವಿಶೇಷ. ಅದರಲ್ಲೂ ಕೆಜಿಎಫ್ ಚಿತ್ರದ ರಾಕಿ ಭಾಯ್ ಎಂಟ್ರಿಯ ಕೆಲವು ರಗಡ್ ದೃಶ್ಯಗಳನ್ನು ಹಾಡಿನಲ್ಲಿ ಸೇರಿಸಿ ರ‍್ಯಾಪ್‌ ಸಾಂಗ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

ರಾಕಿಂಗ್ ಸ್ಟಾರ್ ಗಾಗಿಯೇ ಈ ಹಾಡನ್ನು ತಯಾರು ಮಾಡಲಾಗಿದ್ದು, ರಾಕಿ ಭಾಯ್ ಅನ್ನು ವರ್ಣಿಸಿ ರ‍್ಯಾಪ್‌ ಮಾಡಲಾಗಿದೆ. ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್. ಸಿಂಗಲ್ಲಾಗಿ ಬರೋನು ಮೊನ್‍ಸ್ಟರ್ ಅನ್ನೋ ಡೈಲಾಗ್ ಹಾಡಿನಲ್ಲಿದ್ದು, ಪ್ರೇಕ್ಷಕರಲ್ಲಿ ಕ್ರೇಜ್ ಹೆಚ್ಚಿಸಿದೆ.

ಸದ್ಯ ರಾಕಿಭಾಯ್ ಹಾಗೂ ಚಿತ್ರತಂಡ ಕೆಜಿಎಫ್-2 ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ನಿರತವಾಗಿದೆ. ಅಕ್ಟೋಬರ್ ನಲ್ಲಿ ಕೆಜಿಎಫ್-2 ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಬಹು ನಿರೀಕ್ಷಿದ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿದ್ದು, ಕೆಜಿಎಫ್-2ನಲ್ಲಿ ರಾಕಿ ಭಾಯ್ ಅಬ್ಬರ ಹೇಗಿರಲಿದೆ? ಪ್ರಶಾಂತ್ ನೀಲ್ ಈ ಬಾರಿ ಇನ್ನೇನು ಮೋಡಿ ಮಾಡಲಿದ್ದಾರೆ ಎನ್ನುವುದನ್ನ ನೋಡಲು ಸಿನಿಪ್ರಿಯರು ಕಾದು ಕುಳಿತಿದ್ದಾರೆ.

Click to comment

Leave a Reply

Your email address will not be published. Required fields are marked *