ಬೆಂಗಳೂರು: ಭಾರತದ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಹೆಚ್ಚು ಸದ್ದು ಮಾಡುತ್ತಿದೆ. ಐದು ಭಾಷೆಯಲ್ಲಿ ರಿಲೀಸ್ ಆದ ಕೆಜಿಎಫ್ ಚಿತ್ರ ಐದು ಭಾಷೆಯ ಬಾಕ್ಸ್ ಆಫೀಸ್‍ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಕೆಜಿಎಫ್ ಚಿತ್ರ 5 ಭಾಷೆಯಲ್ಲಿ ಒಟ್ಟು 2,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಹಿಂದಿಯಲ್ಲಿ 1,500 ಚಿತ್ರಮಂದಿರ, ಕನ್ನಡದಲ್ಲಿ 400 ಚಿತ್ರಮಂದಿರ, ತೆಲುಗುದಲ್ಲಿ 400 ಚಿತ್ರಮಂದಿರ, ತಮಿಳಿನಲ್ಲಿ 100 ಹಾಗೂ ಮಲೆಯಾಳಂನಲ್ಲಿ 60 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.
Advertisement
#KGF continues to trend very, very well… Mon is higher than Fri and similar to Sat… #Christmas holiday today should boost its biz further… Fri 2.10 cr, Sat 3 cr, Sun 4.10 cr, Mon 2.90 cr. Total: ₹ 12.10 cr. India biz. Note: HINDI version.
— taran adarsh (@taran_adarsh) December 25, 2018
Advertisement
“ಕೆಜಿಎಫ್ ಚಿತ್ರ ಅತ್ಯುತ್ತಮವಾಗಿ ಟ್ರೆಂಡ್ ಆಗುತ್ತಿದೆ. ಸೋಮವಾರದ ಕಲೆಕ್ಷನ್ ಶುಕ್ರವಾರದ ಕಲೆಕ್ಷನ್‍ಕ್ಕಿಂತ ಹೆಚ್ಚಿದೆ. ಕ್ರಿಸ್‍ಮಸ್ ರಜೆ ಇರುವುದರಿಂದ ಇಂದು ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆ ಇದೆ. ಕೆಜಿಎಫ್ ಚಿತ್ರ ಶುಕ್ರವಾರ 2.10 ಕೋಟಿ ರೂ, ಶನಿವಾರ 3 ಕೋಟಿ ರೂ, ಭಾನುವಾರ 4.10 ಕೋಟಿ ರೂ. ಹಾಗೂ ಸೋಮವಾರ 2.90 ಕೋಟಿ ರೂ ಕಲೆಕ್ಷನ್ ಆಗಿದೆ. ಕೆಜಿಎಫ್ ಚಿತ್ರ ಹಿಂದಿ ವರ್ಷನ್‍ನಲ್ಲಿ ಒಟ್ಟು 12.10 ಕೋಟಿ ರೂ. ಕಲೆಕ್ಷನ್ ಆಗಿದೆ” ಎಂದು ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
Advertisement
Advertisement
ಕನ್ನಡಿಗರು ಅಲ್ಲದೇ ಹಿಂದಿ, ತಮಿಳು, ತೆಲುಗು ಭಾಷಿಕರು ಸಹ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಾರವೂ ಕೆಜಿಎಫ್ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.
ಕೆಜಿಎಫ್ ಚಿತ್ರ ಇಡೀ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ತನ್ನ ಛಾಪನ್ನು ಮೂಡಿಸಿ, ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆನಡಾದ ಟೊರೆಂಟೋದಲ್ಲಿ ಕೆಜಿಎಫ್ ಚಿತ್ರ ನೋಡಲು ಮಾರಿಷಸ್ ಸೇರಿದಂತೆ ಸುತ್ತ ಮುತ್ತಲ ದೇಶಗಳಿಂದ ಕನ್ನಡಿಗರು ಮುಗಿಬಿದ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv