CinemaLatestMain PostSandalwood

ರಾಕಿಭಾಯ್ ಘರ್ಜನೆಗೆ ಹೆದರಿ ಓಡಿದ ಮಗ

ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಕೆಜಿಎಫ್ ಚಿತ್ರದ ಯಶಸ್ಸಿನ ಉತ್ತುಂಗದಲ್ಲಿ ತೇಲಾಡುತ್ತಿದ್ದು, ಕೆಲಸದಿಂದ ಕೊಂಚ ಬಿಡುವ ತೆಗೆದುಕೊಂಡು ಫ್ಯಾಮಿಲಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈಗಾಗಲೇ ಚಿತ್ರವೂ ಬಾಕ್ಸಾಫೀಸ್‍ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಬಾಲಿವುಡ್, ಟಾಲಿವುಡ್, ಮಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸುತ್ತಾ ಬರುತ್ತಿರುವ ರಾಕಿಭಾಯ್ ಈಗ ಹ್ಯಾಪಿ ಮೂಡ್‍ನಲ್ಲಿ ಇದ್ದಾರೆ.

ಯಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹರಿಬಿಟ್ಟಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಅವರು ತಮ್ಮ ಮುದ್ದು ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಸಮಯ ಕಳೆಯುತ್ತಿದ್ದು, ಯಥರ್ವ ತಂದೆಗೆ ಐ ಲವ್ ಯೂ ಹೇಳಿ ನಾನು ದೈತ್ಯ ಡೈನೋಸಾರ್ ಎಂದು ಕ್ಯೂಟ್ ಆಗಿ ಕಿರುಚುತ್ತಾನೆ. ಆಗ ಯಶ್ ನಾನು ಈಗ ಹುಲಿಯಾಗುವುದನ್ನು ನೋಡು ಎಂದು ಘರ್ಜಿಸಿದಾಗ ಯಥರ್ವ ಅಲ್ಲಿಂದ ಹೆದರಿ ಓಡಿ ಹೋಗುತ್ತಾನೆ. ಬಳಿಕ ಯಶ್ ಅಲ್ಲಿಯೇ ಇದ್ದ ಮಗಳನ್ನು ತಬ್ಬಿಕೊಂಡು ಗಣೇಶಾ ಓಡಿ ಹೋದ ಮಗಳೇ ಎಂದು ಮುದ್ದಾಡುತ್ತಾರೆ. ಇದನ್ನೂ ಓದಿ: `ಕೆಜಿಎಫ್ 2′ ಹೊಸ ದಾಖಲೆ: 1200 ಕೋಟಿ ಕಲೆಕ್ಷನ್ ಮಾಡುವತ್ತ ರಾಕಿಭಾಯ್ ಚಿತ್ರ

ಬಾಲಿವುಡ್ ಬಾಕ್ಸಾಫೀಸ್ ಅಡ್ಡಾದಲ್ಲಿ ಘಟಾನುಘಟಿಗಳ ಸ್ಟಾರ್ ಚಿತ್ರಗಳನ್ನೇ ಹಿಂದಿಕ್ಕಿ ಯಶ್ ಸಿನಿಮಾ, ಯಶಸ್ವಿಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಿದೆ. ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರಕ್ಕೆ ವಿಶ್ವದ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಕೆಜಿಎಫ್ ವಲ್ರ್ಡ್ ವೈಡ್ ಕಲೆಕ್ಷನ್ 1160 ಕೋಟಿ ಬಾಚಿ, 1200 ಕೋಟಿ ಕಲೆಕ್ಷನ್ ಮಾಡುವುತ್ತಾ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ಕಮಲ್ ಹಾಸನ್ ಚಿತ್ರದಲ್ಲಿ ಸಾಯಿ ಪಲ್ಲವಿ

`ಕೆಜಿಎಫ್ 2′ ಸಿನಿಮಾ ತಾಯಿಯ ಸೆಂಟಿಮೆಂಟ್ ಕಥೆಯ ಜತೆ ಕಲಾವಿದರ ನಟನೆ, ನಿರ್ದೇಶನ, ಛಾಯಗ್ರಹಣ, ರವಿ ಬಸ್ರೂರು ನಿರ್ದೇಶನ ಇವೆಲ್ಲವೂ ಸೇರಿ `ಕೆಜಿಎಫ್ 2′ ಈ ವರ್ಷದ ಟಾಪ್ ಚಿತ್ರವಾಗಿ ಹೊರಹೊಮ್ಮಿದೆ. ಯಶ್‍ನ ಕೆಜಿಎಫ್ 3 ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

Leave a Reply

Your email address will not be published.

Back to top button