ಬೆಂಗಳೂರು: ವಿಶ್ವಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ ‘ಕೆಜಿಎಫ್’ ಚಿತ್ರವನ್ನು ವೀಕ್ಷಿಸಿ ಬೇರೆ ಚಿತ್ರರಂಗದ ಕಲಾವಿದರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಹಿರಿಯ ನಟಿ ಸುಮಲತಾ ಅವರು ಕೂಡ ಯಶ್ ಅವರಿಗೆ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
“ಕೆಜಿಎಫ್ ಶುದ್ಧ ಚಿನ್ನ. ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನಿಮಾ ನಾನು ನೋಡಿರಲಿಲ್ಲ. ಯಶ್ ನಿನ್ನ ಧೈರ್ಯ ಹಾಗೂ ನಿನ್ನ ನಿಷ್ಠೆಯನ್ನು ನಾನು ಮೆಚ್ಚುತ್ತೇನೆ. 2 ವರ್ಷ ಪರಿಶ್ರಮದಿಂದ ಈ ಸಿನಿಮಾ ಆಕಸ್ಮಿಕವಾಗಿ ಆಗುವುದಿಲ್ಲ” ಎಂದು ಹಿರಿಯ ನಟಿ ಸುಮಲತಾ ಅಂಬರೀಶ್ ಅವರು ಟ್ವೀಟ್ ಮಾಡಿದ್ದಾರೆ.
Advertisement
#KGF is Pure Gold..a magnificent movie on a scale never seen before in Kannada movies , I applaud @TheNameIsYash for his guts in blvng in this passionately & persevering with 2 years of tremendous hard work , movies like these dont happen just by chance 1/2
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) December 23, 2018
Advertisement
ಸುಮಲತಾ ಅವರ ಟ್ವೀಟ್‍ಗೆ ಯಶ್, “ತುಂಬಾ ಧನ್ಯವಾದಗಳು ಅಕ್ಕ. ನೀವು ಚಿತ್ರವನ್ನು ನೋಡಿದ್ದು ನನಗೆ ಖುಷಿ ಆಯ್ತು. ಈ ಸಂತೋಷವನ್ನು ಹಂಚಿಕೊಳ್ಳಲು ಅಣ್ಣ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅವರು ಮೇಲಿನಿಂದ ನಮ್ಮನ್ನು ನೋಡಿ ಆಶೀರ್ವಾದ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತು” ಎಂದು ರೀ-ಟ್ವೀಟ್ ಮಾಡಿದ್ದಾರೆ.
Advertisement
Thank you so much Akka ❤ It means a lot to me that you watched my movie. Wish Anna was here with us to share the happiness. I am sure he is watching us from above and blessing us always???? https://t.co/LDJQz3zOOi
— Yash (@TheNameIsYash) December 24, 2018
Advertisement
ಸಿನಿಮಾ ಬಿಡುಗಡೆಯಾದ ದಿನ ಟ್ವಿಟ್ಟರ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಫೋಟೋ ಹಾಕಿಕೊಂಡು ಮಿಸ್ ಯು ಅಣ್ಣಾ ಎಂದು ಬರೆದುಕೊಂಡಿದ್ದರು. ಅಂಬರೀಶ್ ಫೋಟೋಗೆ ಸುಮಲತಾ, ಅಭಿಷೇಕ್ ಜೊತೆಗೆ ಯಶ್ ಕೈಮುಗಿಯುತ್ತಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರು.
Miss you Anna.. pic.twitter.com/HkoL4ubaj0
— Yash (@TheNameIsYash) December 21, 2018
ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv