ಬೆಂಗಳೂರು: ನಟ ಯಶ್ ಅವರ ಕಟೌಟ್ ಹಾಕೋದಕ್ಕೆ ಹೋಗಿ ತನ್ನೆರಡು ಕೈಗಳನ್ನ ಕಳೆದುಕೊಂಡಿದ್ದ ಅಭಿಮಾನಿಯನ್ನು ರಾಕಿಂಗ್ ಸ್ಟಾರ್ ಭೇಟಿ ಮಾಡಿದ್ದಾರೆ.
ಹರ್ಷ ಕೈ ಕಳೆದುಕೊಂಡು ಅಭಿಮಾನಿಯಾಗಿದ್ದು, ಜಾತ್ರೆ ಸಂದರ್ಭದಲ್ಲಿ ಯಶ್ ಕಟೌಟ್ ಕಟ್ಟುವಾಗ ವಿದ್ಯುತ್ ಅವಘಡ ಸಂಭವಿಸಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಒಂದು ಲಕ್ಷ ನೆರವು ಕೂಡ ರಾಕಿಂಗ್ ಸ್ಟಾರ್ ಕೊಟ್ಟಿದ್ರು. ಇದೀಗ ಖುದ್ದಾಗಿ ಆ ಅಭಿಮಾನಿಯನ್ನ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ.
Advertisement
ಅಣ್ತಮ್ಮನ ಕಂಡ್ರೆ ಹರ್ಷಗೆ ಅಪಾರ ಅಭಿಮಾನಿ, ತನ್ನ ಎರಡು ಕೈಗಳನ್ನ ಕಳೆದುಕೊಂಡ ಮೇಲಂತೂ ರಾಜಾಹುಲಿಯನ್ನು ನೋಡೋದಕ್ಕೆ ಹಪಹಪಿಸುತ್ತಿದ್ದರು. ಕೊನೆಗೂ ಆತನ ಆಸೆ ಈಡೇರಿದೆ. ಸದ್ಯ ಯಶ್ ಅಭಿಮಾನಿ ಹರ್ಷ ಅವರನ್ನು ಭೇಟಿ ಮಾಡಿದ ಫೋಟೋವನ್ನು ಅಭಿಮಾನಿ ಸಂಘವೊಂದು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ಆ ಫೋಟೋಗೆ ಅಭಿಮಾನಿಯ ಆಸೆ ಪೂರೈಸಿದ ರಾಕಿಂಗ್ ಸ್ಟಾರ್. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಯೊಬ್ಬರು ಜನರನ್ನು ಸ್ವಾಗತ ಕೋರುವ ಕಟೌಟ್ ಅನ್ನು ಹಾಕುವಾಗ ವಿದ್ಯುತ್ ಅವಘಡ ಸಂಭವಿಸಿ ಎರಡು ಕೈಯನ್ನು ಕಳೆದುಕೊಂಡಿದ್ದರು. ಅವರಿಗೆ ನಮ್ಮ “ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ” ದ ವತಿಯಿಂದ ಒಂದು ಲಕ್ಷ ದ ಚೆಕ್ ಅನ್ನು ನೀಡಿ ಹಾಗೂ ಆಸ್ಪತ್ರೆಯ ಖರ್ಚನ್ನು ಭರಿಸಿದ್ದೇವು. ಈಗ ಅಭಿಮಾನಿಯ ಆಸೆಯಂತೆ ರಾಕಿಂಗ್ ಸ್ಟಾರ್ ಯಶ್ ರವರು ಅವನನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಅವನಿಗೆ ಅರ್ಥಿಕವಾಗಿ ಹಾಗೂ ಮನಸಿಕವಾಗಿ ಅವನ ಕುಟುಂಬದವರಿಗೆ ನಿಮ್ಮೊಂದಿಗೆ ಸದಾ ಕಾಲ ನಾವಿದ್ದೇವೆ ಎನ್ನುವ ಭರವಸೆ ನೀಡಿದರು ಎಂದು ಪೋಸ್ಟ್ ಮಾಡಿದ್ದರು.
Advertisement
ಸದ್ಯ ಯಶ್ ತನ್ನ ಅಭಿಮಾನಿಯನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.