ಬೆಂಗಳೂರು: ಶುಕ್ರವಾರ ತೆರೆಕಾಣಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ.
ಕೋರ್ಟ್ ತಡೆಯಾಜ್ಞೆ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರರ ಪರ ವಕೀಲ ರಘುನಾಥ್ , ನನ್ನ ಕ್ಷಕಿದಾರರಾದ ವೆಂಕಟೇಶ್ ಹಾಗೂ ಆನಂದ್ ರವರು ಸಲ್ಲಿಸಿದ್ದ ಹಕ್ಕುಚ್ಯುತಿ ವಿವಾದಕ್ಕೆ ಸಂಬಂಧಿಸಿದಂತೆ, 10ನೇ ಸಿಟಿ ಸಿವಿಲ್ ಕೋರ್ಟ್ ಜನವರಿ 7ರ ವರೆಗೆ ಕೆಜಿಎಫ್ ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ ಎಂದು ಹೇಳಿದ್ದಾರೆ.
ದೃಶ್ಯ ಮಾಧ್ಯಮ ತುಂಬಾ ಪರಿಣಾಮ ಬೀರುತ್ತದೆ. ಹೀಗಾಗಿ ನಿರ್ದೇಶಕರು ಉತ್ತಮವಾದ ಚಲನಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಜಿಎಫ್ ಸಿನೆಮಾದ ಟ್ರೇಲರ್ ಹಾಗೂ ಸನ್ನಿವೇಶಗಳನ್ನು ಗಮನಿಸಿದರೇ, ಇದು ರೌಡಿ ತಂಗಂಗೆ ಸಂಬಂಧಪಟ್ಟ ಚಿತ್ರವಾಗಿದೆ. ಈ ಚಿತ್ರದ ಮೂಲಹಕ್ಕು ವೆಂಕಟೇಶ್ ರವರ ಬಳಿ ಇದೆ. ಇದನ್ನು ಕೆಜಿಎಫ್ ಚಿತ್ರ ದುರುಪಯೋಗ ಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ತಡೆಯಾಜ್ಞೆಯನ್ನು ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಾವು ನ್ಯಾಯಾಲಯಕ್ಕೆ ಕಾಪಿರೈಟ್ ಹೊಂದಿದ್ದರೆ ಬಗ್ಗೆ ದಾಖಲೆಗಳನ್ನು ಸಲ್ಲಿಸಿದ್ದೇವೆ. ಕೆಜಿಎಫ್ ಚಿತ್ರ ಕನ್ನಡ ಭಾಷೆ ಸೇರಿದಂತೆ ಇತರೆ ಯಾವುದೇ ಭಾಷೆಗಳಲ್ಲಿಯೂ ಬಿಡುಗಡೆ ಆಗುವಂತಿಲ್ಲವೆಂದು ಆದೇಶ ನೀಡಿದೆ. ಇದು ಸಂಪೂರ್ಣವಾಗಿ ರೌಡಿ ತಂಗಂ ಗೆ ಸಂಬಂಧಪಟ್ಟ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv