ಶ್ರೀಲಂಕಾದಲ್ಲಿ ಯಶ್- ರಾಕಿ ಭಾಯ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

Public TV
1 Min Read
YASH 1

ನ್ಯಾಷನಲ್ ಸ್ಟಾರ್ ಯಶ್ (Yash) ಅವರು ಕೆಜಿಎಫ್, ಕೆಜಿಎಫ್ 2 (KGF 2)  ಸಕ್ಸಸ್ ನಂತರ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಕೆಜಿಎಫ್ 2 ನಂತರ ಯಾರ ಜೊತೆ ಸಿನಿಮಾ ಮಾಡ್ತಾರೆ ಎಂದು ಫ್ಯಾನ್ಸ್‌ ಎದುರು ನೋಡ್ತಿದ್ದಾರೆ. ಶ್ರೀಲಂಕಾದ ಹೋಟೆಲ್‌ವೊಂದರಲ್ಲಿ ಯಶ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಯಶ್ (Yash) ಜೊತೆಗೆ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಮನೆಮುಂದೆಯೇ ಶವವಾಗಿ ಪತ್ತೆಯಾದ ಖ್ಯಾತ ಕೊರಿಯನ್ ನಟಿ

yash 1 6

ರಾಕಿಂಗ್ ಸ್ಟಾರ್ ಯಶ್ ಅವರು ಹಲವು ವರ್ಷಗಳ ಶ್ರಮದಿಂದಲೇ ಇಂದು ಪ್ರಪಂಚದ ಎಲ್ಲಾ ಕಡೆ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡಿದ್ದಾರೆ. ಹೊಸ ಪಾತ್ರ, ಹೊಸ ಪ್ರಾಜೆಕ್ಟ್ ಮೂಲಕ ಅಬ್ಬರಿಸಲು ಸಕಲ ಸಿದ್ಧತೆ ಮಾಡಿಕೊಳ್ತಿದ್ದಾರೆ.

ನಟ ಯಶ್ ಶ್ರೀಲಂಕಾ (Srilanka) ಭೇಟಿ ನೀಡಿದ್ದಾರೆ. ಅಲ್ಲೂ ಕೂಡ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಯಶ್ ಉಳಿದುಕೊಂಡಿದ್ದ ಹೋಟೆಲ್ ಸಿಬ್ಬಂದಿಗಳು ಸೇರಿದಂತೆ ಸಾಕಷ್ಟು ಅಭಿಮಾನಿಗಳು ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡಿರುವ ರಾಕಿ ಭಾಯ್ ಯಶ್, ಮುಂದಿನ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಕೆವಿಎನ್ ಸಂಸ್ಥೆ ಮೂಲಕ ಸಿನಿಮಾ ಮಾಡುವ ಸುಳಿವನ್ನ ಯಶ್ ನೀಡಿದ್ದರು. ಸೌತ್ ನಿರ್ಮಾಪಕ ದಿಲ್ ರಾಜು ಜೊತೆ ಯಶ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆ. ಎಲ್ಲದಕ್ಕೂ ಯಶ್ ಉತ್ತರ ಕೊಡುವವರೆಗೂ ಕಾದುನೋಡಬೇಕಿದೆ.

Share This Article