ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಯಿಂದ ವಿಶೇಷ ಉಡುಗೊರೆಯನ್ನು ಪಡೆದಿದ್ದಾರೆ.
ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಹುಟ್ಟುಹಬ್ಬದ ದಿನ ಮಾತ್ರವಲ್ಲದೇ ಯಾವಾಗಲೂ ಉಡುಗೊರೆಯನ್ನು ನೀಡುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮಗಳು ಐರಾ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಭಿಮಾನಿ ನಟ ಯಶ್ಗೆ ಉಡುಗೊರೆ ನೀಡುತ್ತಿರುವ ಫೋಟೋವನ್ನು ಅಭಿಮಾನಿಗಳು ತಮ್ಮ ಫ್ಯಾನ್ಸ್ ಪೇಜ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ “ನಮ್ಮ ರಾಕಿಂಗ್ ದಂಪತಿಯ ಮುದ್ದಿನ ಮಗಳು ಐರಾ ಅವರ ಸುಂದರ ಕಲಾಕೃತಿಯೊಂದಿಗೆ ನಮ್ಮ ಯಶ್ ಅವರನ್ನು ಭೇಟಿಯಾದ ಅಭಿಮಾನಿ” ಎಂದು ಬರೆದುಕೊಂಡಿದ್ದಾರೆ.
ನಮ್ಮ ರಾಕಿಂಗ್ ದಂಪತಿಗಳ ಮುದ್ದಿನ ಮಗಳು "ಐರಾ" ಅವರ ಸುಂದರ ಕಲಾಕೃತಿಯೊಂದಿಗೆ ನಮ್ಮ @TheNameIsYash ಅವರನ್ನು ಭೇಟಿಯಾದ ಅಭಿಮಾನಿ..!#RockingStarYash pic.twitter.com/9ru96n3z2f
— Team Yash FC (@TeamYashFC) October 17, 2019
ಕೃಷ್ಣ ಜನ್ಮಾಷ್ಟಮಿ ದಿನದಂದು ರಾಧಿಕಾ, ಐರಾಳಿಗೆ ಕೃಷ್ಣನಂತೆ ಉಡುಪು ಹಾಕಿ ಮೇಕಪ್ ಮಾಡಿದ್ದರು. ಈ ವೇಳೆ ಐರಾಳ ಫೋಟೋಗಳನ್ನು ಕ್ಲಿಕ್ಕಿಸಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋವನ್ನು ನೋಡಿ ಅಭಿಮಾನಿ ಕಲಾಕೃತಿ ಬಿಡಿಸಿದ್ದಾರೆ. ನಂತರ ಅದಕ್ಕೆ ಫ್ರೇಮ್ ಹಾಕಿಸಿ ಯಶ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಯಶ್ ಮಗಳಿಗೆ ಈಗ 10 ತಿಂಗಳಾಗಿದ್ದು, ಶೀಘ್ರದಲ್ಲೇ ರಾಧಿಕಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ. ಭಾನುವಾರ ರಾಧಿಕಾ ತಮ್ಮ ಸ್ನೇಹಿತರ ಜೊತೆ ಸೀಮಂತ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದರು. ಮಂಗಳವಾರ ಫೋಟೋವೊಂದನ್ನು ಹಂಚಿಕೊಂಡ ರಾಧಿಕಾ, ಬುಧವಾರ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು.
ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು.